2 ದಶಕಗಳ ನಂತರ ಅಖಂಡ ಧಾರವಾಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಮನ್ನಣೆ…!
1 min readಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸಿಗದ ರಾಜಕೀಯ ಮನ್ನಣೆ, ಸಲೀಂ ಅಹ್ಮದರ ಮೂಲಕ ದೊರೆತಿದ್ದು, ಜನರಲ್ಲಿ ಜಾತ್ಯಾತೀತ ಮನೋಭಾವನೆಯನ್ನ ತೋರಿಸುತ್ತಿದೆ.
ಅನುಭವಿ ರಾಜಕಾರಣಿ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಂದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹುರಿಯಾಳು ಸಲೀಂ ಅಹ್ಮದ ಮೊದಲ ಪ್ರಾಶಸ್ತ್ಯದ ಮೂಲಕ ಗೆದ್ದು ಬಂದಿದ್ದಾರೆ.
ಸಧ್ಯ ಹುಬ್ಬಳ್ಳಿ ಪೂರ್ವ ಕ್ಷೇತ್ರವಾಗಿದ್ದ ವಿಧಾನಸಭಾ ಕ್ಷೇತ್ರವನ್ನ ಮೊದಲು ಜಬ್ಬಾರಖಾನ ಹೊನ್ನಳ್ಳಿಯವರು ಪ್ರತಿನಿಧಿಸಿದ್ದರು. ಹಾವೇರಿಯ ಲೋಕಸಭಾ ಕ್ಷೇತ್ರದಲ್ಲಿ ಪ್ರೋಪೆಸರ್ ಐ.ಜಿ.ಸನದಿಯವರು ಲೋಖಸಭಾ ಸದಸ್ಯರಾಗಿದ್ದರು. ಇದಾದ ಮೇಲೆ ಅಲ್ಪಸಂಖ್ಯಾತರಿಗೆ ಪ್ರಮುಖ ಕ್ಷೇತ್ರದಲ್ಲಿ ಮನ್ನಣೆ ಸಿಕ್ಕಿರಲಿಲ್ಲ.
ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹ್ಮದ ಅವರು ತಮ್ಮ 57ನೇ ವಯಸ್ಸಿನಲ್ಲೂ ಕಾರ್ಯಕರ್ತರಂತೆ ಪಕ್ಷಕ್ಕಾಗಿ ದುಡಿಯುತ್ತಲೇ ಬಂದಿದ್ದಾರೆ. ಈ ಬಾರಿಯೂ ಕೆಲವು ಅನುಭವಿ ರಾಜಕಾರಣಿಗಳು ಇವರನ್ನ ವಿರೋಧ ಮಾಡಿದ್ದರೂ ಕೂಡಾ, ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಸಲೀಂ ಅಹ್ಮದರ ರಾಜಕೀಯ ನಡೆ ಗೆಲುವಿಗೆ ಕಾರಣವಾಗಿದೆ.
ದಶಕಗಳಿಂದ ಅಲ್ಪಸಂಖ್ಯಾತರಿಗೆ ಯಾವುದೇ ಪ್ರಮುಖ ಗೆಲುವು ಈ ಭಾಗದಲ್ಲಿ ಸಿಕ್ಕಿರಲಿಲ್ಲ. ಅದೀಗ ಸಲೀಂ ಅಹ್ಮದರ ಮೂಲಕ ಈಡೇರಿದಂತಾಗಿದೆ.