ನವಲಗುಂದದಲ್ಲಿ ಹಾಡುಹಗಲೇ ಕಳ್ಳತನ.. ಚಿನ್ನಾಭರಣ, ನಗದು ಲೂಟಿ..

ನವಲಗುಂದ: ಸೋಮವಾರ ಮಧ್ಯಾಹ್ನ ಗಾಂಧೀ ಮಾರುಕಟ್ಟೆ ಬಳಿಯ ಕರ್ನಾಟಕ ಬ್ಯಾಂಕ್ ಹತ್ತಿರದ ಅಕ್ಕಿ ಓಣಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಹಣ, ಒಡವೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಬಸವರಾಜ ಕಮತರ, ನಿಂಗಪ್ಪ ಕಮತರ ಎಂಬುವವರ ಮನೆಗಳ್ಳತನವಾಗಿದೆ ಎಂದು ಮಾಹಿತಿ ದೊರಕಿದ್ದು, ತಾಳಿ ಚೈನ್, ನೆಕ್ಲೆಸ್, ಉಂಗುರ, 15 ಸಾವಿರ ನಗದು, ಕಿವಿ ಓಲೆ, ಸೇರಿದಂತೆ ಹಲವು ಆಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆದಿದ್ದಾರೆ.