ದುರ್ಗಾದೇವಿ ಪೋಟೋ 500 ರ ಇಪ್ಪತ್ತು ನೋಟು- ಮೊದಲ ಪ್ರಾಶಸ್ತ್ಯದ ಆಣೆ: ಪಕ್ಷೇತರನ ಪವಾಡ….!

ಧಾರವಾಡ: ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ ಅಖಾಡಾ ಸಿದ್ಧವಾಗಿದ್ದು, ಪಕ್ಷೇತರ ಅಭ್ಯರ್ಥಿಯೊಬ್ಬರು ಇಂದಿನಿಂದಲೇ ‘ಕತ್ತಲ ರಾತ್ರಿ’ಯನ್ನ ಹಗಲಲ್ಲೇ ಆರಂಭಿಸಿದ್ದಾರೆ.

ಒಟ್ಟು 11 ಅಭ್ಯರ್ಥಿಗಳ ಪೈಕಿ ಓರ್ವ ಪಕ್ಷೇತರ ಅಭ್ಯರ್ಥಿಯು ಇಂದಿನಿಂದಲೇ ಹಣದ ಹೊಳೆಯನ್ನ ಹರಿಸಲು ಆರಂಭಿಸಿದ್ದಾರೆಂದು ತಿಳಿದು ಬಂದಿದ್ದು, ಹಣವನ್ನ ಕೊಡುವಾಗ ದುರ್ಗಾದೇವಿಯನ್ನ ಪೋಟೊವನ್ನ ಮುಟ್ಟಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆಲವೊಂದಿಷ್ಟು ಗ್ರಾಮ ಪಂಚಾಯತಿಗಳಿಗೆ ಬಂದು ಚಾ ಕುಡಿಯಲು ಐದು ಸಾವಿರ ಕೊಟ್ಟು ಹೋಗಿದ್ದ ಆಸಾಮಿಯೇ ಇಂದು ಓಟಿಗೆ ಹತ್ತು ಸಾವಿರ ರೂಪಾಯಿಯನ್ನ ಕೊಡುತ್ತಿರುವುದು ಗೊತ್ತಾಗಿದೆ.
ಹತ್ತು ಸಾವಿರ ಪಡೆದವರಿಗೆ ದೇವಿಯ ಮೇಲೆ ಆಣೆ ಮಾಡಿಸಿ, ಮೊದಲ ಪ್ರಾಶಸ್ತ್ಯದ ಮತವನ್ನ ನೀಡಬೇಕೆಂದು ಕೇಳಿಕೊಳ್ಳುವುದಲ್ಲದೇ ಎರಡನೇಯ ಮತವನ್ನ ಕಾಂಗ್ರೆಸ್ ಗೆ ಹಾಕುವಂತೆ ಕೇಳಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.
ಬಹುತೇಕ ಚುನಾವಣೆಗಳಲ್ಲಿ ಚುನಾವಣೆ ಹಿಂದಿನ ದಿನ ಇಂತಹ ಪ್ರಕರಣಗಳು ಕೇಳಿ ಬರುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಐದಾರು ದಿನಗಳ ಮೊದಲೇ ಅದನ್ನ ಮಾಡಲಾಗುತ್ತಿದೆ.