Posts Slider

Karnataka Voice

Latest Kannada News

ಹುಬ್ಬಳ್ಳಿ ತಲ್ವಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪೊಲೀಸ್ ಪೇದೆ ಅಮಾನತ್ತು..!

1 min read
Spread the love

ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ತಲ್ವಾರ ಪ್ರಕರಣವೊಂದರ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕಿದ ನಂತರ ಹಲವು ಆಯಾಮಗಳಲ್ಲಿ ಪ್ರಕರಣ ನಡೆಯುತ್ತಿದ್ದು, ಇದೀಗ ಕಸಬಾಪೇಟೆ ಪೊಲೀಸ್ ಠಾಣೆಯ ಪೊಲೀಸರೋರ್ವರನ್ನ ಬೇರೆ ಕೇಸಿನ ನೆಪದಲ್ಲಿ ಅಮಾನತ್ತು ಮಾಡಿ, ಪ್ರಮುಖರು ಉಳಿದುಕೊಳ್ಳುವ ಷಢ್ಯಂತ್ರ ರೂಪಿಸಲಾಗಿದೆ.

ಕರ್ನಾಟಕವಾಯ್ಸ್.ಕಾಂ ತಲ್ವಾರ ಪ್ರಕರಣದ ಎಳೆಯನ್ನ ಹೊರ ಹಾಕಿದ ನಂತರ ಕಸಬಾಪೇಟೆ ಪೊಲೀಸ್ ಠಾಣೆಯವರು ಬಿಟ್ಟು ಕಳಿಸಿದ್ದ ಆರೋಪಿಗಳನ್ನ ಮತ್ತೆ ಬಂಧಿಸಿ, ಜೈಲಿಗೆ ಕಳಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧವೇ ಇಲ್ಲವೆಂದು ಬೇರೆ ಕಾರಣ ನೀಡಿ, ಅಮಾನತ್ತು ಮಾಡಿದ್ದಾರೆ. ಆದರೆ, ಅದರೊಳಗಿನ ಸತ್ಯವೇನು ಎಂಬುದನ್ನ ನಿಮ್ಮ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕುತ್ತಿದೆ.

ನವೆಂಬರ್ 8ರಂದು ಕಂಟ್ರೋಲ್ ರೂಂನಿಂದ ಕಸಬಾಪೇಟೆ ಪೊಲೀಸ್ ಠಾಣೆಗೆ ಕಾಲ್ ಬರತ್ತೆ. ಅದು ಜನ್ನತನಗರದಲ್ಲಿ ತಲ್ವಾರ ಮತ್ತು ಬಡಿಗೆ ಹಿಡಿದುಕೊಂಡು ಹೊಡೆದಾಡುತ್ತಿದ್ದಾರೆಂದು ಹೇಳಲಾಗತ್ತೆ. ಅದೇ ಸಮಯದಲ್ಲಿ 112ಕ್ಕೂ ಕರೆ ಹೋಗಿರತ್ತೆ. ಸ್ಥಳಕ್ಕೆ ಎಎಸ್ಐ ಕಲ್ಲಾಪುರ ಹೋಗಿದ್ದಾಗಲೇ ಜೊತೆಗಿದ್ದ ಕಲ್ಲಪ್ಪ ಕುಂಬಾರ ಮತ್ತು ಎಲ್.ವೈ.ಪಾಟೀಲ ಓರ್ವನನ್ನ ಹಿಡಿದಿರುತ್ತಾರೆ. ಅದೇ ಸಮಯದಲ್ಲಿ 112ದವರು ಬಂದು ಮಾತಿಗೆ ಮಾತು ಬೆಳೆಯುತ್ತಿದ್ದಾಗ, ಸಿಕ್ಕ ಆರೋಪಿಯೊಬ್ಬ ಅಲ್ಲಿಂದ ಪರಾರಿಯಾಗಿರುತ್ತಾನೆ.

ಆ ಸಮಯದಲ್ಲಿ ಸಿಕ್ಕ ಆಟೋದೊಂದಿಗೆ ಠಾಣೆಗೆ ಬಂದು ತಲ್ವಾರ ಮತ್ತು ಬಡಿಗೆಗಳನ್ನ ಠಾಣೆಯೊಳಗಡೆ ಇಡಲಾಗತ್ತೆ. ಇದಾದ ಮೇಲೆ 13ನೇ ತಾರೀಖಿಗೆ ಮೂವರು ಆರೋಪಿಗಳನ್ನ ಹಿಡಿದು ತರಲಾಗಿರತ್ತೆ. ಅದೇ ಸಮಯದಲ್ಲಿ ಸೆಂಟ್ರಿಯಲ್ಲಿದ್ದ ಶ್ರೀಕಾಂತ ಗೋಣೆಪ್ಪನವರ ಎಂಬ ಪೇದೆ ಅವರನ್ನ ವಿಚಾರಣೆ ಮಾಡಿದ ಹಾಗೇ ಮಾಡಿ, ಎರಡೇಟು ಕೊಡುತ್ತಾರೆ. ಅಷ್ಟರಲ್ಲಾಗಲೇ, ಕ್ರೈಂನಲ್ಲಿರುವ ಎಲ್.ವೈ.ಪಾಟೀಲ ಬಂದವನೇ, ಆರೋಪಿಗಳನ್ನ ಕರೆದುಕೊಂಡು ಹೊರಗಡೆ ಹೋಗುತ್ತಾರೆ. ಅದೇ ಸಮಯದಲ್ಲಿ ಠಾಣಾದಲ್ಲಿದ್ದ ಎನ್.ವೈ.ಪಾಯಕನವರ, ಆರೋಪಿಗಳನ್ನ ಕರೆದುಕೊಂಡು ಹೋಗುತ್ತಿದ್ದ ಕ್ರೈಂ ಪಾಟೀಲರಿಗೆ “ಅವರ ಹೆಸರು ಬರೆದುಕೊಂಡು, ಪೋಟೊ ತೆಗೆದುಕೊಂಡು ಕಳಿಸು” ಎಂದು ಹೇಳುತ್ತಾರಾದರೂ, ಅದಾಗಲೇ ಕ್ರೈಂ ಕೋಡು ತಲೆಗೇರಿಸಿಕೊಂಡಿರುವ ಎಲ್.ವೈ.ಪಾಟೀಲರು, ‘ಸಾಹೇಬ್ರಿಗೆ ಹೇಳೇನಿ’ ಎನ್ನುತ್ತಲೇ ಹೊರಗೆ ಹೋಗಿ ಬಿಡುತ್ತಾರೆ.

ಇದೇಲ್ಲ ಮುಗಿದ ಮತ್ತೆ ಬೆಳಿಗ್ಗೆ ಅದೇ ವಿಷಯಕ್ಕೆ ಮತ್ತೊಬ್ಬ ಕ್ರೈ ಸಿಬ್ಬಂದಿ ಸೆಂಟ್ರಿಯಲ್ಲಿದ್ದ ಶ್ರೀಕಾಂತನ ಜೊತೆಗೆ ಮಾತಿಗೆ ಮಾತು ಬೆಳೆಸುತ್ತಾರೆ. ಅದೇ ಸಮಯದಲ್ಲಿ ಶ್ರೀಕಾಂತ ಎಂಬ ಪೇದೆಗೆ, ಎದುರಿಗಿದ್ದವರು ‘ಸಾಹೇಬ್ರಿಗೆ ಹೇಳಿ, ನಿನ್ನ ಸಸ್ಪೆಂಡ್ ಮಾಡೇಸ್ತೇನಿ’ ಎಂದು ಧಮಕಿ ಹಾಕ್ತಾರೆ. ಅದಾಗಲೇ ರಾತ್ರಿಯ ವಿಷಯದಿಂದ ಬೇಸರಗೊಂಡಿದ್ದ ಶ್ರೀಕಾಂತ ಎಂಬ ಪೇದೆ ಠಾಣೆಯಲ್ಲಿಯೇ ಡ್ರೆಸ್ ಕಳೆದು, ನಾನು ತಪ್ಪು ಮಾಡಿದ್ರೇ, ಈಗಲೇ ಡ್ರೆಸ್ ಕಳಿಯಲು ಸಿದ್ಧವೆಂದು ಡ್ರೆಸ್ ತೆಗೆದು ಟೇಬಲ್ ಮೇಲೆ ಇಡುತ್ತಾರೆ. ಅಲ್ಲಿಗೆ ನವೆಂಬರ್ 14 ಮುಗಿದಿರತ್ತೆ.

ಇಷ್ಟೇಲ್ಲಾ ರಗಳೆಗಳು ನಡೆದರೂ ಎಲ್ಲವನ್ನೂ ಮುಚ್ವಿಟ್ಟು “ಗಡಿಗೆಯಲ್ಲಿ ನೀರು” ಕುಡಿದು ಸುಮ್ಮನಿದ್ದವರು, ಒಮ್ಮೇಲೆ ಆ್ಯಕ್ಟಿವ್ ಆಗ್ತಾರೆ. ಅದಕ್ಕೆ ಕಾರಣವಾಗಿದ್ದು ಕರ್ನಾಟಕವಾಯ್ಸ್.ಕಾಂ ನಲ್ಲಿ ಬಂದ ಮಾಹಿತಿ. ಇದಾದ ತಕ್ಷಣವೇ 13ನೇ ತಾರೀಖಿಗೆ ಬಿಟ್ಟು ಕಳಿಸಿದವರನ್ನ ಮತ್ತೆ ಬಂಧಿಸಿದ ನಾಟಕ ಮಾಡಿ, ಜೈಲಿಗೆ ಕಳಿಸುತ್ತಾರೆ.

ಸೋಜಿಗ ಎಂದರೇ, ಯಾವುದೇ ‘161’ ಇಲ್ಲದ ಶ್ರೀಕಾಂತ ಎಂಬ ಪೇದೆಯನ್ನ ನವೆಂಬರ್ 14 ಘಟನೆಯನ್ನ ಆಧರಿಸಿ “ಅಶಿಸ್ತಿನ ಅಮಾನತ್ತು” ಮಾಡಿಸಿ ಕೈತೊಳೆದುಕೊಂಡಿದ್ದಾರೆ.

ಅಸಲಿಗೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿ, ತಲ್ವಾರಗಳನ್ನ ಠಾಣೆಯಲ್ಲಿಯೇ ಇಟ್ಟು, ‘161’ ಮಾಡಿಕೊಂಡು ‘ಗಡಿಗೆಯಲ್ಲಿ ನೀರು’ ಕುಡಿದವರನ್ನ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಸುಮ್ಮನೆ ಬಿಡಲಾರರು ಎಂಬ ನಿರೀಕ್ಷೆಯಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಲ್ಲವೇ..

ಠಾಣೆಯಲ್ಲಿರುವ ಅಧಿಕಾರಿಯೋರ್ವರು ‘ನನ್ನ ಯಾರೂ ಏನೂ ಹರ… ಆಗಲ್ಲ’ ಎಂದು ಪೌರುಷವನ್ನ ತೋರಿಸಿಕೊಂಡಿದ್ದಾರೆ. ತಪ್ಪಿಗೆ ಯಾರೂ ಏನೂ ಹರ.. ದಿಲ್ಲ. ದೇವರು ಈಗಾಗಲೇ ನಿಮ್ಮನ್ನೊಮ್ಮೆ ‘ಹರಿಸಿದ್ದಾನೆ’ ಎಂಬುದು ನೆನಪಿರಲಿ.. ಅಲ್ಲವೇ… ನಿಮ್ಮ ಬಾಯಿ.. ನಿಮ್ಮ ಹಕ್ಕು..


Spread the love

Leave a Reply

Your email address will not be published. Required fields are marked *

You may have missed