“ನಿಮ್ಮೌಂಶ್ ನಿರ್ವೌಂಶ ಆಗ್ಲಿ” ಎಂದ ಅರ್ಚಕನಿಗೆ ಧರ್ಮದೇಟು… ‘ಕರಕಿ ಕಥೆ’ ಹಿಂದಿನ ಸತ್ಯವೇನು ಗೊತ್ತಾ…!?

ಹುಬ್ಬಳ್ಳಿ: ತಾವೇ ವಾಸಿಸುವ ಪ್ರದೇಶದಲ್ಲಿ ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ದೇವಸ್ಥಾನವನ್ನ ನಿರ್ಮಾಣ ಮಾಡಿದ ಜನರಿಗೇನೆ ಮಾನಸಿಕವಾಗುವ ಹಾಗೇ ಶಾಪ ಹಾಕಿದ ಪರಿಣಾಮವೇ ಅರ್ಚಕರಿಗೆ ಧರ್ಮದೇಟು ಬೀಳಲು ಕಾರಣವೆಂದು ಹೇಳಲಾಗಿದೆ.
ನಗರದ ಗೊಕುಲ ರಸ್ತೆಯಲ್ಲಿರುವ ಗ್ರೀನ ಗಾರ್ಡನ್ ಕಾಲೋನಿಯ ಶ್ರೀ ಕರೆಯಮ್ಮ ದೇವಸ್ಥಾನದ ಅರ್ಚಕ ಮಂಜುನಾಥ ಹೆಬ್ಬಾರ ಅವರನ್ನ ದೇವಸ್ಥಾನಕ್ಕೆ ನೇಮಕ್ಕೆ ಮಾಡಿ, ಸಂಬಳ ಕೊಡುತ್ತಿರುವುದು ಅಲ್ಲಿನ ನಿವಾಸಿಗಳೇ. ಆದರೆ, ಅವರಿಗೇನೆ ಶಾಪ ಹಾಕಿದ್ದರಿಂದಲೇ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಅರ್ಚಕ ಮಹಾಶಯ ಜಡಿ ಕುಟುಂಬದರಿಗೆ ಶಾಪ ಹಾಕಿದ್ದನ್ನ ಕೇಳಲು ಬಂದಾಗ, ಮನಸೋ ಇಚ್ಚೆ ಅರ್ಚಕ ಮಾತನಾಡಿದ್ದಾರೆ. ಅದರಿಂದ ರೋಸಿ ಹೋದ ಸಂದೀಪ ಜಡಿ ಹಾಗೂ ರೇಶ್ಮಾ ಜಡಿ ಎರಡೇಟು ಕೊಟ್ಟಿದ್ದಾರೆಂದು ಗೊತ್ತಾಗಿದೆ. ಘಟನೆ ನಡೆದ ಹದಿನೈದು ದಿನ ಕಳೆದರೂ ಅರ್ಚಕ ಮಾತ್ರ ದೂರು ದಾಖಲು ಮಾಡಿಲ್ಲ.
ಘಟನೆಯ ನಂತರ ಅರ್ಚಕ ಕೋರ್ಟಿಗೂ ಹೋಗಿದ್ದರೆಂದು ಹೇಳಲಾಗಿದ್ದು, ಗ್ರೀನ್ ಗಾರ್ಡನ್ ನಿವಾಸಿಗಳು ಈಗಾಗಲೇ ಅರ್ಚಕನನ್ನ ಬದಲಾವಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಹಾಗಾಗಿಯೇ ವೀಡಿಯೋವನ್ನ ವೈರಲ್ ಮಾಡಿ, ಅರ್ಚಕನ ಮೇಲೆ ಹಲ್ಲೆ ಆಗಿದೆ ಎಂದು ಬಿಂಬಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.