ದುರಾತ್ಮರು ತಲ್ವಾರ್ ಸಮೇತ ಸಿಕ್ಕರೂ “ಗಡಿಗೆಯಲ್ಲಿ ನೀರು” ಕುಡಿದ ಬಿಟ್ಟು ಕಳಿಸಿದ ಭೂಪ…!?

ಹುಬ್ಬಳ್ಳಿ: ವಾಣಿಜ್ಯನಗರಿಯನ್ನ ಚೋಟಾ ಮುಂಬೈ ಎನ್ನುವುದಕ್ಕೆ ಕೇವಲ ಕ್ರೈಂ ಪ್ರಕರಣಗಳಿಂದಲ್ಲ. ಇಲ್ಲಿರುವ ಹಪಾಹಪಿ ಪೊಲೀಸರ ಕುಕೃತ್ಯದಿಂದಲೂ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ. ಇಂತಹದೇ ಮತ್ತೊಂದು ಪ್ರಕರಣವನ್ನ ಹೊರ ಹಾಕಲು ಹೊರಟಿದೆ ನಿಮ್ಮ ಕರ್ನಾಟಕವಾಯ್ಸ್.ಕಾಂ.
ಹೌದು.. ಹುಬ್ಬಳ್ಳಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಾಂಜಾ ಪ್ರಕರಣದಲ್ಲಿ ಅಮಾನತ್ತಾದ ಮೇಲೆ ಆಮೆಗತಿಯಲ್ಲಿ ತನಿಖೆ ನಡೆಯುತ್ತಿದೆ. ಅಷ್ಟರಲ್ಲಿಯೇ ಮತ್ತೊಂದು ಠಾಣೆಯಲ್ಲಿ ಅದೇ “161” ಮಾಡಿ ಹಲವರನ್ನ ಕೇಸ್ ಮಾಡದೇ ಕಳಿಸಲಾಗಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ.

ನಗರದ ಪ್ರಮುಖ ಠಾಣೆಯೊಂದರ ವ್ಯಾಪ್ತಿಯಲ್ಲಿ ಆಟೋದಲ್ಲಿ ತಲ್ವಾರ್, ಬಡಿಗೆಗಳನ್ನಿಟ್ಟುಕೊಂಡು ಅಲೆಯುತ್ತಿದ್ದವರು ಓರ್ವ ಎಎಸ್ಐ ಅವರನ್ನ ನೋಡಿ ಓಡಿ ಹೋಗಿದ್ದರು. ಕರ್ತವ್ಯನಿಷ್ಠ ಎಎಸ್ಐವೊಬ್ಬರು ಪರಾರಿಯಾದವರು ಬಿಟ್ಟು ಹೋದ ಆಟೋ ಜಪ್ತಿ ಮಾಡಿದಾಗ ಅದರಲ್ಲಿ ತಲ್ವಾರ, ಬಡಿಗೆಗಳು ಸಿಕ್ಕಿದ್ದವು. ಎಎಸ್ಐ ಆಟೋ ಸಮೇತ ಠಾಣೆಗೆ ತಂದಿಟ್ಟಿದ್ದರು. ಆದರೆ, ನಂತರ ನಡೆದದ್ದೇ ಪೊಲೀಸರಾಟ.
ಆಟೋ ಸಿಕ್ಕಿದ್ದರಿಂದ ಆ ಮೂಲಕ ಪರಾರಿಯಾದವರನ್ನ ಹುಡುಕುವ ಪ್ರಯತ್ನಕ್ಕೆ ಮುಂದಾಗಿ, ಮೊದಲೊಬ್ಬರನ್ನ ತಂದು ಆಮೇಲೆ ಮತ್ತೆ ಮೂವರನ್ನ ತಂದು “ಗಡಿಗೆಯಲ್ಲಿ ನೀರು” ಕುಡಿದು ಕಳಿಸಲಾಗಿದೆ. ಅದಕ್ಕೊಬ್ಬ ಜನ್ನತನಗರದ ಕುತ್ಬು ಎಂಬಾತನನ್ನ ಬಳಕೆಯನ್ನ ಮಾಡಲಾಗಿದೆ.
ಗೊಬ್ಬರದ ಚೀಲದಲ್ಲಿ ಠಾಣೆಯಲ್ಲಿಟ್ಟ ತಲ್ವಾರ ಮತ್ತು ಬಡಿಗೆಗಳು ಠಾಣೆಯಲ್ಲಿ ಸಾಕ್ಷಿ ಹೇಳಲು ರೆಡಿಯಾಗಿದ್ದವು. ಆದರೆ, ಪೊಲೀಸ್ ಕಮೀಷನರ್ ಲಾಬುರಾಮ್ ಅವರಿಗೆ ಕಾಣುತ್ತಿಲ್ಲ. ಯಾಕೆಂದರೆ, ಅವರ ಮುಂದೆ ಬಿಳಿ ಬಟ್ಟೆಯನ್ನ ಕಟ್ಟಲಾಗಿದೆ. ಅದರ ಹಿಂದೆ ನಡೆಯುತ್ತಿರುವ ಕರಾಳ ಘಟನೆಗಳು ನಡೆಯುತ್ತಲೆ. ಅವರು ಪೊಲೀಸಿಂಗ್ ಮಾಡ್ತಿದ್ದಾರೆ, ಇವರೂ “ಟಂಗಾ ಟುಂಗಾ” ಮಾಡ್ತಿದ್ದಾರೆ.
ಗಾಂಜಾ ಎಲ್ಲಿ ಹೋಯಿತು ಎಂಬುದನ್ನ ಪತ್ತೆ ಹಚ್ಚಲು ಇನ್ನೂ ಆಗಿಲ್ಲ. ಆದರೆ, ಠಾಣೆಯಲ್ಲಿರೋ ತಲ್ವಾರ, ಬಡಿಗೆಯನ್ನಾದರೂ ಕಂಡು ಹಿಡಿಯುವ ಪ್ರಯತ್ನಕ್ಕೆ ದಕ್ಷರೆನಿಸಿಕೊಂಡವರು ಮುಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.
ಈ ಸುದ್ದಿಯ ಬಹು ಮುಖ್ಯ ಡಿಟೇಲ್ಸ್ ನಿರೀಕ್ಷಿಸಿ..