ಹಾನಗಲ್ ಗೆಲುವು: ಪತೇಶಾವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಶ್ರೀನಿವಾಸ ಮಾನೆ..

ಹುಬ್ಬಳ್ಳಿ: ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶ್ರೀನಿವಾಸ ಮಾನೆ ಅವರು ಹುಬ್ಬಳ್ಳಿಯ ಪ್ರತಿಷ್ಠಿತ ಹಜರತ್ ಸೈಯ್ಯದ್ ಫತೇಹಶಾವಲಿ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಿದರು.

ಶಾಸಕ ಶ್ರೀನಿವಾಸ ಮಾನೆ ಅವರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಪಾಲಿಕೆ ಸದಸ್ಯ ಅಬ್ದುಲ್ ವಹಾಬ್ ಮುಲ್ಲಾ, ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕರ್ನಾಟಕ ರಾಜ್ಯ ಆಹಾರ ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ, ಪಾಲಿಕೆ ಸದಸ್ಯ ಇಮ್ರಾನ್ ಎಲಿಗಾರ, ಪಾಲಿಕೆ ಮಾಜಿ ಸಧಸ್ಯ ಬಷೀರ್ ಗುಡಮಾಲ್, ಸಂದೀಪ ರೋಖಡೆ, ನೂರ್ ಅಹ್ಮದ ಮನಿಯಾರ್, ಸಮದ ಗುಲ್ಬರ್ಗಾ, ರಫಿಕ್ ಚೌವ್ಹಾಣ, ಮಹೇಶ ದಾಬಡೆ, ಮಂಜುನಾಥ ಉಪ್ಪಾರ, ಸಮದ ಜಮಖಾನೆ ಹಾಗೂ ಇನ್ನಿತರರಿದ್ದರು.