“ಆಪ್ತಮಿತ್ರ”ನ ಗೆಲ್ಲಿಸಲು ಪಣ ತೊಟ್ಟ ಸಂತೋಷ ಲಾಡ: ಮಾಜಿ ಸಿಎಂ ಸಿದ್ದು ಜೊತೆ ಪ್ರಚಾರದಲ್ಲಿ ಭಾಗಿ….!

ಹಾವೇರಿ: ತನ್ನೊಂದಿಗೆ ಸದಾಕಾಲ ಜೊತೆಗಿರುವ ಹಾನಗಲ್ಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರ ಗೆಲುವಿಗಾಗಿ ಮಾಜಿ ಸಚಿವ ಸಂತೋಷ ಲಾಡ ನಿರಂತರವಾಗಿ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಇಂದು ಬೆಂಗಳೂರಿನಿಂದ ಆಗಮಿಸಿದ ಸಂತೋಷ ಲಾಡ ಅವರು ನೇರವಾಗಿ ಹಾನಗಲ್ಲ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.
ಮಾಜಿ ಸಿಎಂ ಸಿದ್ಧರಾಮಯ್ಯನವರ ಜೊತೆ ಉಪಹಾರ ಸೇವಿಸಿ, ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವು ಪ್ರಮುಖರೊಂದಿಗೆ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.
ಕಲಘಟಗಿ ಕ್ಷೇತ್ರದಲ್ಲಿ ಜನರೊಂದಿಗೆ ನಿರಂತರ ಸಂಪರ್ಕ ಹೊಂದುವುದಲ್ಲದೇ, ತಮ್ಮ ಕ್ಷೇತ್ರದ ಸುತ್ತಲೂ ಇರುವ ಕ್ಷೇತ್ರದಲ್ಲೂ ಸಂತೋಷ ಲಾಡ ತಮ್ಮದೇ ಆದ ವರ್ಚಸ್ಸು ಹೊಂದಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.