ಹುಬ್ಬಳ್ಳಿ ಸಿಸಿಬಿ ಪೊಲೀಸರಿಂದ “ಬೃಹತ್ ಕನಕ” ಬೇಟೆ…
1 min readಹುಬ್ಬಳ್ಳಿ: ದಶಕದ ಪೊಲೀಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಚಿನ್ನದ ಬೇಟೆಯನ್ನಾಡಿದ್ದು, ನಗರದಲ್ಲಿ ಇಂತಹದೊಂದು ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಂತಾಗಿದೆ.
ನಗರದಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲಿ 38ವರೆ ಲಕ್ಷ ಮೌಲ್ಯದ 804.1ಗ್ರಾಂ ಚಿನ್ನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿನೀಮಯ ರೀತಿಯಲ್ಲಿ ಚಿನ್ನ ಸಾಗಿಸುತ್ತಿದ್ದ ಹುಬ್ಬಳ್ಳಿ ಕೇಶ್ವಾಪುರ ಮಧುರಾ ಎಸ್ಟೇಟ್ ನಿವಾಸಿ ಚೇತನ ದೇವೆಂದ್ರಪ್ಪ ಜನ್ನು ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ.
ಗಿರಣಿಚಾಳದ ಏಳು ಮಕ್ಕಳ ತಾಯಿಯ ಗುಡಿಯ ಹಿಂಭಾಗದಲ್ಲಿ ಪೊಲೀಸರು ಪ್ರಕರಣವನ್ನ ಪತ್ತೆ ಮಾಡಿದ್ದಾರೆ. ಘಟನೆಯ ಬಗ್ಗೆ ಸಿಸಿಬಿ ಪೊಲೀಸರು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆಯನ್ನ ಮುಂದುವರೆಸಿದ್ದಾರೆ.
ಆರೋಪಿ ಚೇತನ ಬೆಲ್ಟನಲ್ಲಿ ಚಿನ್ನವನ್ನ ಮರೀಚಿಕೆ ಮಾಡಿಕೊಂಡು ಬಂದಿದ್ದನೆಂದು ಹೇಳಲಾಗಿದೆ.