ಗೋವನಕೊಪ್ಪದ ಬಳಿ ಚಿರತೆ: ನೋಡಿವರೇನಂತಾರೆ ಗೊತ್ತಾ…!?

ಧಾರವಾಡ: ತಾಲೂಕಿನ ಕವಲಗೇರಿ ಬಳಿಯ ಕಬ್ಬಿನ ಹೊಲವೊಂದರಲ್ಲಿ ಕಂಡು ಬಂದಿದ್ದ ಚಿರತೆಯೇ ಗೋವನಕೊಪ್ಪದ ಬಳಿ ಕಂಡು ಬಂದಿದ್ದು, ಗ್ರಾಮದಲ್ಲೀಗ ಆತಂಕ ಮೂಡಿದೆ.
ಗೋವನಕೊಪ್ಪದ ಬಸಮ್ಮಾ ಎಂಬ ವೃದ್ಧೆ ಹಾಗೂ ವೀರನಗೌಡ ಎಂಬ ಬಾಲಕ ಚಿರತೆಯನ್ನ ನೋಡಿದ್ದು, ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಗೋವನಕೊಪ್ಪ ಗ್ರಾಮದ ಬಾಳೆ ತೋಟದಲ್ಲಿ ಹೋಗಿರುವ ಶಂಕೆಯಿದ್ದು, ಇಲಾಖೆಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.