ಹೊಸ ತಾಲೂಕುಗಳಿಗೆ ಬಿಇಓಗಳನ್ನ ಕೊಡಿ: ಸಿಎಂ, ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ಯಾರು ಗೊತ್ತಾ..
1 min readಧಾರವಾಡ: ಹೊಸದಾಗಿ ಮಂಜುರಾದ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ನೇಮಕ ಮಾಡುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ ಅವರಿಗೆ ಪತ್ರವನ್ನ ಬರೆದು ಮನವಿ ಮಾಡಿದ್ದಾರೆ.
ಮನವಿ ಇಂತಿದೆ..
ಇವರಿಗೆ
ಮಾನ್ಯ ಶ್ರೀ ಬಿ ಸಿ ನಾಗೇಶ್ ರವರು
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು
ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರು -01
ವಿಷಯ :ರಾಜ್ಯದಲ್ಲಿ ಹೊಸದಾಗಿ ಮಂಜೂರಾಗಿರುವ ತಾಲ್ಲೂಕುಗಳಿಗೆ ಶೀಘ್ರವಾಗಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಯನ್ನು ಮಂಜೂರು ಮಾಡುವ ಕುರಿತು ಮನವಿ.
ಮಾನ್ಯರೆ..
ರಾಜ್ಯದಲ್ಲಿ ಹೊಸದಾಗಿ ಮಂಜೂರಾಗಿರುವ 49 ಹೊಸ ತಾಲ್ಲೂಕುಗಳಿಗೆ ಮಕ್ಕಳ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಮತ್ತು ಇನ್ನಷ್ಟು ಗುಣಮಟ್ಟದ ಶಿಕ್ಷಣವನ್ನು ಅನುಷ್ಠಾನಗೊಳಿಸುವುದಕ್ಕಾಗಿ,ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಪರ ದೆಸೆಯಲ್ಲಿ ಸಾಗಲು ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕೂಡಲೇ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಯನ್ನು ಮಂಜೂರು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒದಗಿಸಿಕೊಟ್ಟು ,ನಮ್ಮ ಶಿಕ್ಷಕರ ಮತ್ತು ಪಾಲಕರ ಮತ್ತು ಸಮಾಜದ ಏಳಿಗೆಗಾಗಿ ತಾವು ಇನ್ನಷ್ಟು ಸ್ಫೂರ್ತಿ ನೀಡಬೇಕೆಂದು ಕೇಳಿಕೊಳ್ಳುತ್ತೇವೆ.ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಸುಲಲಿತವಾದ ಆಡಳಿತಕ್ಕಾಗಿ ಇದು ಅತ್ಯಗತ್ಯವಿದ್ದು ಬೇರೆ ಬೇರೆ ಇಲಾಖೆಗೆ ನೇಮಿಸುವಂತೆ ನಮ್ಮ ಶಿಕ್ಷಣ ಇಲಾಖೆಗೆ ಆದಷ್ಟು ಶೀಘ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿ ಕಾರ್ಯಾಲಯಗಳನ್ನು ಪ್ರಾರಂಭಿಸಬೇಕು.ಸಿಬ್ಬಂದಿಯನ್ನು ಒದಗಿಸಬೇಕೆಂದು ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಗೌರವಪೂರ್ವಕ ವಂದನೆಗಳೊಂದಿಗೆ
ತಮ್ಮವಿಧೇಯರು
ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು
ಮಲ್ಲಿಕಾರ್ಜುನ ಸಿ.ಉಪ್ಪಿನ
ಮೊ:9741340206
ರಾಜ್ಯಾಧ್ಯಕ್ಷರು
ಅಶೋಕ ಎಂ ಸಜ್ಜನ
ಮೊ:9036124574