BRTS ಇಂಜಿನಿಯರ್ ಬಿಟ್ಟು ಇನ್ನುಳಿದ ಇಂಜಿಯನಿರ್ ಗಳಿಗೆ “ಅಭಿಯಂತರ ದಿನದ” ಶುಭಾಶಯ…!?

ಹುಬ್ಬಳ್ಳಿ: ಅವಳಿನಗರದ ಮಧ್ಯ ಕಾರ್ಯನಿರ್ವಹಿಸುತ್ತಿರುವ ಬಿಆರ್ ಟಿಎಸ್ ಯೋಜನೆಯ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಆದರಿವತ್ತು, ಇಂಜಿನಿಯರ್ ದಿನಾಚರಣೆಯ ದಿನದಂದು ಯೋಜನೆಯ ಇಂಜಿನಿಯರ್ ಗಳಿಗೆ ಶುಭಾಶಯವನ್ನ ಬೇಡ ಎನ್ನುವ ಪೋಸ್ಟರಗಳು ಹರಿದಾಡುತ್ತಿವೆ.

ಹೌದು.. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆ ಬಗ್ಗೆ ಅವರದ್ದೆ ಪಕ್ಷದ ಶಾಸಕ ಅರವಿಂದ ಬೆಲ್ಲದ ಹಲವು ಬಾರಿ ಟೀಕೆಯನ್ನ ಮಾಡಿದ್ದಾರೆ. ಅದು ಜಮಾನಸದಲ್ಲಿ ಉಳಿದಿದೆ, ಕೂಡಾ.
ಆದರೆ, ಇಂದು ಚಹ ಶಿರಾ ಹೆಸರಿನ ಪೋಸ್ಟರವೊಂದು ಹರಿದಾಡುತ್ತಿದ್ದು, ಅದರಲ್ಲಿ ಬಿಆರ್ ಟಿಎಸ್ ಪರಿಕಲ್ಪನೆಯನ್ನು ಹುಬ್ಬಳ್ಳಿಗೆ ಅಳವಡಿಸಿದ ಇಂಜಿನಿಯರ್ ಒಬ್ಬನ್ನಾ ಬಿಟ್ಟು ಉಳಿದವರಿಗೆಲ್ಲಾ ‘ಹ್ಯಾಪಿ ಇಂಜಿನಿಯರ್ಸ್ ಡೇ’ ಎಂದು ಶುಭಾಶಯ ಕೋರಿ, ಕುಹಕವಾಡಿದ್ದಾರೆ.