ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಕಾರಿನ ಬಳಿಯೇ ಶವ…!

ಹುಬ್ಬಳ್ಳಿ: ನಗರದ ಕಮರಿಪೇಟೆ ಪ್ರದೇಶದ ಮೋಮಿನ್ ಪ್ಲಾಟ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವವೊಂದು ಕಾರಿನ ಪಕ್ಕದಲ್ಲಿಯೇ ಪತ್ತೆಯಾಗಿದ್ದು, ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ.

ಸುಮಾರು 45 ರಿಂದ 55 ವಯಸ್ಸಿನ ವ್ಯಕ್ತಿಯೇ ಸಾವಿಗೀಡಾಗಿದ್ದು, ಹೀಗಾಗಲು ನಿಖರವಾದ ಕಾರಣವೇನು ಎಂಬುದು ಗೊತ್ತಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಯನ್ನ ನಡೆಸಿದ್ದಾರೆ.
ತಡರಾತ್ರಿಯವರೆಗೂ ಏನೂ ಕಂಡು ಬಂದಿಲ್ಲವಾದರೂ, ಬೆಳಗಿನ ಜಾವ ಶವ ಪತ್ತೆಯಾಗಿರುವುದು ಸಂಶಯಗಳಿಗೆ ಕಾರಣವಾಗಿದೆ. ವ್ಯಕ್ತಿಯ ಗುರುತಿನ ಜೊತೆಗೆ ಕಾರಣವನ್ನೂ ಪೊಲೀಸರು ಪತ್ತೆ ಹಚ್ಚಬೇಕಿದೆ.