ಶಾಲೆಗಳಿಗೆ ಅ.10ರಿಂದ 20ರ ವರೆಗೆ ದಸರಾ ರಜೆ ಘೋಷಿಣೆ…

ಬೆಂಗಳೂರು: ರಾಜ್ಯದ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಕ್ಟೋಬರ್ 10 ರಿಂದ 20ರ ವರೆಗೆ ದಸರಾ ರಜೆ ನಿಗದಿಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಾಲಾ ಕರ್ತವ್ಯದ ಮೊದಲ ಅವಧಿಯನ್ನು ಜುಲೈ 1ರಿಂದ ಅಕ್ಟೋಬರ್ 9 ರ ವರೆಗೆ ಹಾಗೂ ಎರಡನೇಯ ಅವಧಿಯನ್ನು ಅಕ್ಟೋಬರ್ 21ರಿಂದ 2022 ರ ಏಪ್ರಿಲ್ 30ರ ವರೆಗೆ ನಿಗದಿಪಡಿಸಲಾಗಿದೆ.
2022 ರ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆಯನ್ನ ಘೋಷಣೆ ಮಾಡಲಾಗಿದೆ.