“ಹು-ಧಾ”ದಲ್ಲಿ ಮತ ಗಳಿಕೆಯಲ್ಲಿ ಬಿಜೆಪಿ ಹಿನ್ನೆಡೆ- ವಿಧಾನಸಭಾ ಚುನಾವಣೆಗೆ ಹೋಲಿಸಿದ್ರೇ, ಅರವಿಂದ ಬೆಲ್ಲದ್ ಏರಿಯಾ ಪ್ಲಾಪ್…!
1 min readಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯ ರಂಗು ಮುಗಿದು, ಫಲಿತಾಂಶವೂ ಹೊರ ಬಂದ ನಂತರವೂ, ಮತಗಳಿಕೆಯ ಬಗ್ಗೆ ಲೆಕ್ಕಾಚಾರಗಳು ನಿಲ್ಲುತ್ತಿಲ್ಲ. ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಒಳಪಡುವ ಮಹಾನಗರ ಪಾಲಿಕೆಯ ಮತದಾನದಲ್ಲಿ ಬಿಜೆಪಿಗೆ ಮತಗಳು ಕಡಿಮೆಯಾಗಿವೆ.
ಹೌದು.. ಮಹಾನಗರ ಪಾಲಿಕೆಯ ಚುನಾವಣೆಯಲ್ಲಿನ ಮತ ಎಣಿಕೆಗಳನ್ನ ನೋಡಿದಾಗ ಹಾಗೇ ಅನಿಸದೇ ಇರದು. ಬಿಜೆಪಿಯ ಶಾಸಕ ಅಮೃತ ದೇಸಾಯಿಯವರು ಪ್ರತಿನಿಧಿಸುತ್ತಿರುವ ಧಾರವಾಡ-71 ಕ್ಷೇತ್ರದಲ್ಲಿನ ವಾರ್ಡ್ ನಂಬರ 1ರಿಂದ 9ರ ವರೆಗೆ ಬಿಜೆಪಿ 20916 ಮತಗಳನ್ನ ಪಡೆದರೇ, ಕಾಂಗ್ರೆಸ್ 17481 ಮತಗಳನ್ನ ಪಡೆದಿದೆ.
ಶಾಸಕ ಅರವಿಂದ ಬೆಲ್ಲದರು ಪ್ರತಿನಿಧಿಸುವ ಪಶ್ಚಿಮ ಕ್ಷೇತ್ರದ ವಾರ್ಡ್ ಸಂಖ್ಯೆ 10ರಿಂದ 34ರ ವರೆಗೆ ಬಿಜೆಪಿ 55003 ಮತಗಳನ್ನ ಪಡೆದರೇ, ಕಾಂಗ್ರೆಸ್ 51495 ಮತಗಳನ್ನ ಪಡೆದಿದೆ. ಹಾಗೇ ನೋಡಿದ್ರೇ, ವಿಧಾನಸಭಾ ಚುನಾವಣೆಯಲ್ಲಿ ಇದೇ ವಾರ್ಡುಗಳಲ್ಲಿ ಬಿಜೆಪಿಗೆ 96462 ಮತಗಳು ಬಿದ್ದಿದ್ದರೇ ಕಾಂಗ್ರೆಸ್ಸಿಗೆ 55975 ಮತಗಳು ಚಲಾವಣೆಗೊಂಡಿದ್ದವು.
ಇನ್ನೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದಲ್ಲಿನ ವಾರ್ಡ್ ಸಂಖ್ಯೆ 35 ರಿಂದ 59ರ ವರೆಗೆ 54854 ಮತಗಳನ್ನ ಬಿಜೆಪಿ ಪಡೆದಿದ್ದರೇ, ಕಾಂಗ್ರೆಸ್ 37857 ಮತಗಳನ್ನ ಪಡೆದಿದೆ. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ 75794 ಮತಗಳನ್ನ ಪಡೆದಿದ್ದರೇ ಕಾಂಗ್ರೆಸ್ 54488 ಮತಗಳನ್ನ ಪಡೆದಿತ್ತು.
ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಪ್ರತಿನಿಧಿಸುವ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ 58026 ಮತಗಳನ್ನ ಪಡೆದಿದ್ದರೇ, ಬಿಜೆಪಿ 36678 ಮತಗಳನ್ನ ಪಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 77080 ಮತಗಳನ್ನ ಪಡೆದಿತ್ತು. ಬಿಜೆಪಿ 55613 ಮತಗಳಿಗೆ ಸಿಮೀತವಾಗಿತ್ತು.
ನಾಲ್ಕು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಒಟ್ಟು 168269 ಮತಗಳನ್ನ ಪಡೆದಿದ್ದರೇ, ಬಿಜೆಪಿಗೆ 6023 ಮತಗಳಷ್ಟು ಕಡಿಮೆ ಮತಗಳನ್ನ (162246) ಕಾಂಗ್ರೆಸ್ ಪಡೆದುಕೊಂಡಿದೆ.
ಇನ್ನೂ ಜೆಡಿಎಸ್ ಕಣದಲ್ಲಿದ್ದ ಎಲ್ಲ ಕ್ಷೇತ್ರಗಳಲ್ಲೂ ಒಟ್ಟು 16720 ಮತಗಳನ್ನ ಪಡೆದಿದ್ದರೇ, ಎಐಎಂಐಎಂ ಪಕ್ಷವೂ ಕಡಿಮೆ ವಾರ್ಡುಗಳಲ್ಲಿ ಸ್ಪರ್ಧಿಸಿ 16059 ಮತಗಳನ್ನ ಪಡೆದಿದೆ.
ಆಮ್ ಆದ್ಮಿ ಪಕ್ಷವೂ ನಿಲ್ಲಿಸಿದ ಎಲ್ಲ ಕ್ಷೇತ್ರಗಳನ್ನ ಕೂಡಿಸಿದರೇ 5357 ಮತಗಳನ್ನ ಪಡೆದಿದ್ದು, ಒಟ್ಟಾರೆ ನೋಟಾ ಮತಗಳಿಗಿಂತ 188 ಹೆಚ್ಚು ಓಟನ್ನ ಆಪ್ ಪಡೆದುಕೊಂಡಿದೆ.
ಈ ಫಲಿತಾಂಶವನ್ನ ನೋಡಿದಾಗ ಹಾಲಿ ಶಾಸಕರು ತಮ್ಮ ಚುನಾವಣೆಯಲ್ಲಿ ಮಾಡುವಷ್ಟು ಶ್ರಮವನ್ನ, ಪಾಲಿಕೆ ಚುನಾವಣೆಯಲ್ಲಿ ಮಾಡದಿರುವುದು ಕಾಣುತ್ತದೆ. ಹಾಗಾಗಿಯೇ ಬಿಜೆಪಿಯ ಒಟ್ಟಾರೆ, ಮತಗಳು ಕಡಿಮೆಯಾಗಿವೆ.