ಹುಬ್ಬಳ್ಳಿ ಸರ್ಕೀಟ್ ಹೌಸ್ ಬಳಿಯಲ್ಲಿ ಹೆಣ…!

ಹುಬ್ಬಳ್ಳಿ: ನಗರದ ದೇಶಪಾಂಡೆನಗರದಲ್ಲಿನ ಸರ್ಕೀಟ್ ಹೌಸ್ ಕಂಪೌಂಡಿಗೆ ಹತ್ತಿಕೊಂಡಿರುವ ಪುಟ್ ಪಾತ್ ನಲ್ಲಿ ವ್ಯಕ್ತಿಯೋರ್ವ ಮಲಗಿದ ರೀತಿಯಲ್ಲಿಯೇ ಶವವಾದ ಘಟನೆ ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಅಂದಾಜು 50 ವಯಸ್ಸಿನ ವ್ಯಕ್ತಿಯಾಗಿರುವ ಇವರ ಬ್ಯಾಗ್ ಪಕ್ಕದಲ್ಲಿಯೇ ಬಿದ್ದಿದೆ. ಹಾಕಿಕೊಂಡಿದ್ದ ಪಾದರಕ್ಷೆಗಳು ಕೂಡಾ ಅಲ್ಲಿಯೇ ಬಿದ್ದಿವೆ. ಬಹುತೇಕರು ಅಲ್ಲಿಯೇ ವ್ಯಕ್ತಿ ಮಲಗಿರಬಹುದೆಂದು ಸುಮ್ಮನಾಗಿದ್ದಾರೆ.
ಕೆಲವು ಸಮಯದ ನಂತರ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ವ್ಯಕ್ತಿ ಸಾವಿಗೀಡಾಗಿರುವುದು ಖಚಿತಗೊಂಡಿದೆ. ಆದರೆ, ಈತನ ಬಗ್ಗೆ ಯಾವುದೇ ವಿವರಗಳು ಸಿಕ್ಕಿಲ್ಲ.
ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದು, ವ್ಯಕ್ತಿಯ ಪಕ್ಕದಲ್ಲಿ ಬಿದ್ದಿರುವ ಬ್ಯಾಗಿನಿಂದ ವಿಳಾಸವೇನಾದರೂ ಸಿಗಬಹುದಾ ಎಂದು ನೋಡಬೇಕಿದೆ.