ಉತ್ಸಾಹಿ ಯುವಕ ಬಸವರಾಜ ಜಾಧವ ಗೆಲವುವಿಗಾಗಿ ವಿನಯ ಕುಲಕರ್ಣಿ ದಂಪತಿಗಳಿಂದ ನಿರಂತರ ಪ್ರಚಾರ…!

ಧಾರವಾಡ: ಮಹಾನಗರ ಪಾಲಿಕೆಯ 8ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಸವರಾಜ ಜಾಧವ, ಉತ್ಸಾಹಿ ಯುವಕರಾಗಿದ್ದು, ಇವರ ಗೆಲುವಿಗಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ದಂಪತಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಬಸವರಾಜ ಜಾಧವ ಕ್ಷೇತ್ರದಲ್ಲಿ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿಯವರು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದು, ವಿನಯ ಕುಲಕರ್ಣಿಯವರು ಸಾಮಾಜಿಕ ಜಾಲತಾಣದ ಮೂಲಕ, ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆಯಡಿಯಲ್ಲಿ ಬಂಡುಕೋರ ಅಭ್ಯರ್ಥಿಗಳಾಗಿರುವ ಮಂಜುನಾಥ ಕದಂ ಹಾಗೂ ಪ್ರಕಾಶ ಘಾಟಗೆ ವಿರುದ್ಧ ಪಕ್ಷ ಕ್ರಮ ಜರುಗಿಸಲು ಮುಂದಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ್ತಷ್ಟು ಬಲದಂತಾಗಲಿದೆ.