ಕೊಂಗವಾಡದಲ್ಲಿ ನಡೆದ ಕಾರ್ಯಾಚರಣೆ ಹೆಂಗಿತ್ತು ಗೊತ್ತಾ.. ಆ ಎರಡು ಜೀವಗಳು ಏನಾಗಿವೆ ನೋಡಿ…!

ನವಲಗುಂದ: ತಾಲೂಕಿನ ಕೊಂಗವಾಡ ಗ್ರಾಮದಲ್ಲಿ ಸಹೋದರರಿಬ್ಬರು ಹೊಲಕ್ಕೆ ಹೋಗಿ ಬರುವ ಮುನ್ನವೇ ನೀರು ಅವರನ್ನ ಆವರಿಸಿತ್ತು. ಬದುಕುವುದೇ ಕಷ್ಟ ಎಂದುಕೊಳ್ಳುವ ಮುನ್ನವೇ ನವಲಗುಂದ ಪೊಲೀಸರು ಅದಾಗಲೇ ಕಾರ್ಯಾಚರಣೆಯನ್ನ ಆರಂಭಿಸಿದ್ದರು.

ಶರಣಯ್ಯ ಜವಳಿ ಮತ್ತು ಚೆನ್ನಬಸಯ್ಯ ಜವಳಿ ಎಂಬ ಸಹೋದರರು ಹಳ್ಳದಲ್ಲಿ ಸಿಲುಕಿದ್ದರು. ಈ ಮಾಹಿತಿಯನ್ನ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಜನರು ತಲುಪಿಸಿದ್ದೆ ತಡಾ, ಇಡೀ ತಂಡವನ್ನ ಅಲ್ಲಿಗೆ ಕಳಿಸಿದರು.
ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಅವರು ತಮ್ಮ ಸಿಬ್ಬಂದಿಗಳ ಜೊತೆಗೆ ಅಗ್ನಿಶಾಮಕ ದಳದವರನ್ನ ಕರೆದುಕೊಂಡು ಕಾರ್ಯಾಚರಣೆಯನ್ನ ಆರಂಭಿಸಿದರು. ಆದರೆ, ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಹೋಗುವುದು ದುಸ್ತರವಾಗಿತ್ತು.
ಒಂದು ಕಡೆ ಇಬ್ಬರು ಸಹೋದರರು, ಅವರನ್ನ ಉಳಿಸಲು ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ನಡೆಸಿದ ಪ್ರಯತ್ನ ಕೊನೆಗೂ ಫಲ ನೀಡಿತು. ಸ್ಥಳಕ್ಕೆ ತಹಶೀಲ್ದಾರ ನವೀನ ಹುಲ್ಲೂರ ಸೇರಿದಂತೆ ಹಲವರು ಆಗಮಿಸಿದ್ದರು.