Posts Slider

Karnataka Voice

Latest Kannada News

ಪೊಲೀಸ್ ಕಮೀಷನರ್ ಲಾಬುರಾಮ್ ವರ್ಗಾವಣೆ ‘ರೂಮರ್’- ಹಬ್ಬಿಸುತ್ತಿರುವವರಿಗೆ ಇದೇ…!

1 min read
Spread the love

ಹುಬ್ಬಳ್ಳಿ: ದಕ್ಷ ಅಧಿಕಾರಿ ಲಾಬುರಾಮ್ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆಗಿ ಬಂದ ನಂತರ, ಇಲಾಖೆಯಲ್ಲೊಂದು ಶಿಸ್ತು ಆರಂಭವಾಗಿದ್ದು, ಬಹುತೇಕರು ಕೆಲಸವನ್ನ ಮಾಡುತ್ತಿದ್ದಾರೆ. ಹಾಗಾಗಿಯೇ ಕೆಲವರು, ಹತ್ತು ಹದಿನೈದು ದಿನಕ್ಕೊಮ್ಮೆ ಲಾಬುರಾಮ್ ಅವರು ವರ್ಗಾವಣೆ ಆಗುತ್ತಿದ್ದಾರೆಂಬ ವದಂತಿಯನ್ನ ಹರಿಬಿಡುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆಗಿ ಲಾಬುರಾಮ್ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನ, ಅವಳಿನಗರದ ಇಲಾಖೆಯಲ್ಲಿ ಏನೇನು ನಡೆದಿತ್ತು ಎಂಬುದು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಹಗಲಿರುಳು ಹುಬ್ಬಳ್ಳಿ-ಧಾರವಾಡದ ಬಗ್ಗೆ ಚಿಂತನೆ ಮಾಡುವ ದಕ್ಷ ಅಧಿಕಾರಿ ಲಾಬುರಾಮ್ ಅವರು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಲಾಬುರಾಮ್ ಅವರು ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಇಲಾಖೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಗೌರವ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಥರದ ದಂಧೆಗಳಿಗೆ ‘ಅನುಕೂಲ’ ಮಾಡಿಕೊಡುವ ಗೋಜಿಗೂ ಹೋಗಿಲ್ಲ. ಇದರಿಂದ ‘161’ ಮಾಡುವವರಿಗೆ ತಲೆ ನೋವಾಗಿದೆ ಅಷ್ಟೇ. ಆದರೆ, ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಹೆಚ್ಚಾಗಿದೆ.

ಇಷ್ಟೇಲ್ಲಾ ನಡೆಯುತ್ತಿರುವಾಗಲೇ ತಿಂಗಳಲ್ಲಿ ಎರಡ್ಮೂರು ಸಲ, ಲಾಬುರಾಮ್ ಅವರ ವರ್ಗಾವಣೆ ಆಗುತ್ತಿದೆ. ಅವರು ತಂದ ಸಾಮಾನುಗಳನ್ನ ಶಿಪ್ಟ್ ಮಾಡಿದ್ರಂತೆ. ಮುಂದಿನ ವಾರ ಪ್ರಮೋಷನ್ ಇದೆಯಂತೆ.. ಎಂಬ ಅಂತೆ-ಕಂತೆಗಳನ್ನ ಹರಿಯಬಿಡತೊಡಗಿದ್ದಾರೆ. ಇದಕ್ಕೆ ಕಾರಣವೂ ಇದೆಯಂದು ಹೇಳಲಾಗುತ್ತಿದೆ. ಕೆಲವು ಅಕ್ರಮ ದಂಧೆಕೋರರಿಗೆ ದಾರಿ ತಪ್ಪಿಸಿ ತಮ್ಮ ಬಳಿಯೇ ಇರಬೇಕೆಂದು ಬಯಸುವ ಜಾಯಮಾನದವರು, ದೂರದ ಬೆಟ್ಟವನ್ನ ತೋರಿಸಿ, ಎಲ್ಲಿಯೂ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.

ಅಸಲಿಗೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಯಾವುದೇ ಮುಲಾಜಿಗೆ ಕಾರ್ಯ ನಿರ್ವಹಿಸಲು ಬಂದಿಲ್ಲ. ಇಲಾಖೆಯ ಗೌರವ ಹೆಚ್ಚಿಸಿ, ಕಾನೂನು ಪಾಲನೆಯನ್ನ ಮಾಡುತ್ತಿದ್ದಾರಷ್ಟೇ. ಅವರು ಬಂದಿರುವುದು ಸರಕಾರ ಮಾಡಿದ ಆದೇಶದಿಂದ. ಹಾಗೇ ಹೋಗುವುದಾದರೇ ಸರಕಾರ ಆದೇಶ ಮಾಡಿದ್ರೇ ವರ್ಗಾವಣೆ ಆಗುತ್ತದೆ. ಆದರೆ, ಸುಳ್ಳೆ ಸುಳ್ಳು ವದಂತಿ ಕ್ರಿಯೇಟ್ ಮಾಡುವವರಿಗೆ ಒಂದಿಷ್ಟು ವಿಷಯಗಳು ಗೊತ್ತಿರಲಿ. ಅವರು ಇಲ್ಲಿಂದ ಹೋಗಲು ಇಲ್ಲಿಗೆ ಬಂದಿಲ್ಲ. ಅವರ ಪ್ರಮೋಷನ್ ಸಮಯವೂ ಇದಲ್ಲ. ಅಷ್ಟೇ ಅಲ್ಲ, ಕಮೀಷನರ್ ಲಾಬುರಾಮ್ ಅವರು ತಂದಿರೋದು ಮೂರ್ನಾಲ್ಕು ಬ್ಯಾಗ್, ಅವುಗಳನ್ನ ವಾಹನದಲ್ಲಿ ಕಳಿಸುವಷ್ಟು ದೊಡ್ಡದಲ್ಲ.

ವದಂತಿ ಹಬ್ಬಿಸುತ್ತಿರುವ ಇಲಾಖೆಯ ಕೆಲವರಿಗೆ ಚಾಟಿಯೇಟು ಬೀಸುವ ಉದ್ದೇಶದಿಂದಲೇ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಕಮೀಷನರ್ ವರ್ಗಾವಣೆ ಬಗ್ಗೆ ಮಾತಾಡುವ ಕಮೀಷನರೇಟಿನವರಿಗೆ ‘ಲಾಬುರಾಮ್ ಎಫೆಕ್ಟ್’ ಆಗಲಿದೆ ಎನ್ನಲಾಗುತ್ತಿದೆ.


Spread the love

Leave a Reply

Your email address will not be published. Required fields are marked *