ಕುಂದಗೋಳದ ದೇವನೂರಲ್ಲೂ 150ಕುರಿ, ಓರ್ವ ಕುರಿಗಾಯಿ ಬೆಣ್ಣೆಹಳ್ಳದಲ್ಲಿ- ನಡೆಯುತ್ತಿದೆ ಕಾರ್ಯಾಚರಣೆ…!

ಕುಂದಗೋಳ: ತಾಲೂಕಿನ ದೇವನೂರ ಗ್ರಾಮದ ಬಳಿ ರಭಸವಾಗಿ ಹರಿಯುತ್ತಿರುವ ಬೆಣ್ಣೆ ಹಳ್ಳದಲ್ಲಿ 150ಕ್ಕೂ ಹೆಚ್ಚು ಕುರಿಗಳು ಹಾಗೂ ಓರ್ವ ಕುರಿಗಾಯಿ ಸಿಲುಕಿದ ಘಟನೆ ನಡೆದಿದ್ದು, ಕಾರ್ಯಾಚರಣೆಗೆ ಮಳೆ ಅಡಚಣೆಯುಂಟು ಮಾಡಿದೆ.

ಕುರಿಗಳನ್ನ ಮೇಯಿಸಲು ಹೋದ ಸಮಯದಲ್ಲಿ ಏಕಾಏಕಿ ನೀರು ಹೆಚ್ಚಾದ ಪರಿಣಾಮ, ಕುರಿಗಾಯಿ ಅಲ್ಲಿಯೇ ತನ್ನ ಕುರಿಗಳ ಸಮೇತ ಸಿಲುಕಿದ್ದಾನೆ. ಮಾಹಿತಿ ಸಿಕ್ಕ ತಕ್ಷಣವೇ ಕಾರ್ಯಾಚರಣೆ ಆರಂಭವಾಗಿದೆ.
ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಆರಂಭ ಮಾಡಿದ್ದರಾದರೂ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಕುರಿಗಾಯಿ ಸಿಲುಕಿದ ಜಾಗಕ್ಕೆ ಹೋಗಲು ಆಗುತ್ತಿಲ್ಲ.
ಸುಮಾರು 2 ಗಂಟೆಗೂ ಹೆಚ್ಚು ಕಾಲದವರೆಗೆ ಕಾರ್ಯಾಚರಣೆ ಪ್ರಯತ್ನ ವಿಫಲವಾಗಿದ್ದು, ನೀರಿನ ಸೆಳೆವು ಕಡಿಮೆಯಾಗುವುದನ್ನ ಕಾಯುತ್ತಿದ್ದಾರೆ. ದೂರದಲ್ಲಿ ನಿಂತು ಅಧಿಕಾರಿಗಳು ಕುರಿಗಾಯಿಗೆ ಧೈರ್ಯವನ್ನ ತುಂಬಲಾಗುತ್ತಿದೆ.