Posts Slider

Karnataka Voice

Latest Kannada News

ಇತಿಹಾಸ ಸೃಷ್ಟಿಸಿದ ‘ಶಿಕ್ಷಕರ ವೆಬಿನಾರ್’ ನಲ್ಲಿ ತೆಗೆದುಕೊಂಡ ತೀರ್ಮಾನವೇನು ಗೊತ್ತಾ..!

1 min read
Spread the love

ಸ್ವಂತ-ಬೇಡಿದ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಮಾಡಿ ಅವರ ಕುಟಂಬ ಉಳಿಸಿ.. ಮುಖ್ಯ ಮಂತ್ರಿಗಳಿಗೆ  ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ  ಸಜ್ಜನ ಆಗ್ರಹ

ಹುಬ್ಬಳ್ಳಿ: ವರ್ಗಾವಣೆಗಾಗಿ ಬೆಂಗಳೂರು ಚಲೋ ಕುರಿತು 42 ನೇ ವೆಬಿನಾರ್ ಮೀಟಿಂಗ್ ನಲ್ಲಿ ಅಂದಾಜು 813 ಶಿಕ್ಷಕರು ಮೀಟಿಂಗ್ ಗೆ ಸೇರುವುದರ ಮೂಲಕ ಇತಿಹಾಸ ಸೃಷ್ಟಿ ಮಾಡಿದರು. ಈ ವೆಬಿನಾರ್ ಆನ್ಲೈನ್ ಮೀಟಿಂಗ್ ನಲ್ಲಿ ಹುಟ್ಟು ಹೋರಾಟಗಾರ,   ಶೈಕ್ಷಣಿಕ ವಿಚಾರ ಚಿಂತಕರು   ಹಾಗೂ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ರಾಜ್ಯಘಟಕ ಹುಬ್ಬಳ್ಳಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ  ಅಶೋಕ್ ಎಂ ಸಜ್ಜನ ಭಾಗವಹಿಸಿ ನಾಡಿನ ಮೂಲೆ ಮೂಲೆಯಿಂದ ಭಾಗಿಯಾದ ಶಿಕ್ಷಕರು ಹಾಗೂ ಮಹಿಳಾ ಶಿಕ್ಷಕಿಯರ ಅನೇಕ ಸಮಸ್ಯೆಗಳನ್ನು ಆಲಿಸಿ ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಅಭಯ ಹಸ್ತ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಡಿ,ಇಡಿ /ಬಿ,ಇಡಿ /ಎಂ,ಇಡಿ ವಿವಿಧ ವೃತ್ತಿಪರ ಕೋರ್ಸ್ ಮಾಡಿದರೂ ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಬಹುಸಂಖ್ಯಾತ ಪದವೀಧರರು ರಾಜ್ಯದ ಬೆಂಗಳೂರು ಮಂಗಳೂರು  ಹೀಗೆ ಅನೇಕ ನಗರ ಪ್ರದೇಶಗಳಲ್ಲಿರುವ ಖಾಸಗಿ ಕಂಪನಿ ಹಾಗೂ ಗಾರ್ಮೆಂಟ್ಸ್ ಕೆಲಸದಲ್ಲಿ ತೊಡಗಿದ್ದಾರೆ. ಹಾಗಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಈ ಸಂದರ್ಭದಲ್ಲಿ ತಮ್ಮ ಕುಟುಂಬ ಬಿಟ್ಟು 5-6 ನೂರು ಕಿಲೋ ಮೀಟರ್ ದೂರದಲ್ಲಿ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ವಿದ್ಯಾರ್ಥಿ ಹೊಂದಿದ ಭಾವಿ ಶಿಕ್ಷಕರನ್ನು ಗುರುತಿಸಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶಾಲೆಯಲ್ಲಿ ಖಾಲಿ ಇರುವ ಸ್ಥಳಗಳಿಗೆ  ಶಿಕ್ಷಕರನ್ನು ನೇಮಿಸಿಕೊಂಡಲ್ಲಿ  ಇಂಥ ಶಿಕ್ಷಕರು ತಮ್ಮ ಕುಟುಂಬದವರ ಜೊತೆ ಸುಖ ಸಂತೋಷದಿಂದ ಬಾಳಲು ಅನುಕೂಲವಾಗುತ್ತದೆ.

ಅಲ್ಲದೆ ಕಲ್ಯಾಣ ಕರ್ನಾಟಕದ 6ಜಿಲ್ಲೆಗಳಲ್ಲಿ ದಕ್ಷಿಣ ಕರ್ನಾಟಕ ವಿವಿಧ ಜಿಲ್ಲೆಗಳಿಂದ     ಸಿಇಟಿ ಪರೀಕ್ಷೆ ಬರೆದು ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಗುರುಮಾತೆಯರು ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು 5-6 ನೂರು ಕಿಲೋ ಮೀಟರ್ ದೂರದಿಂದ ಬಂದು ಹದಿನೈದು ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ ಏಕಾಂಗಿ ಮಹಿಳಾ ಶಿಕ್ಷಕಿಯರಿಗೆ ಪುಂಡ ಪೋಕರಿಗಳ ಕಾಟ ಅತಿಯಾಗಿದೆ .ಅಲ್ಲದೆ ಗಂಡಹೆಂಡತಿ ಬಹುವರ್ಷಗಳ ಕಾಲ ದೂರವಿರುವುದರಿಂದ ದಾಂಪತ್ಯ ಕಲಹಗಳ ಪ್ರಾರಂಭವಾಗಿ ವಿವಾಹ ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತಿವೆ ಹಾಗೂ ವರ್ಗಾವಣೆಯಾದೆ ಮಹಿಳಾ ಶಿಕ್ಷಕಿಯರು ಆತ್ಮಹತ್ಯೆಗೂ ಪ್ರಯತ್ನಿಸಿದ ಕೆಲವರು ಪ್ರಾಣವನ್ನು ಕಳೆದು ಕೊಂಡಿರುತ್ತಾರೆ ಇನ್ನು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಶಿಕ್ಷಕರು ವರ್ಗಾವಣೆಯಾಗದೆ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಂಡಿದ್ದರಿಂದ ಕುಟುಂಬದ ಸದಸ್ಯರಿಗೆ ತುಂಬಾ ತೊಂದರೆಯುಂಟಾಗಿದೆ.

ಕಾರಣ ಸರ್ಕಾರ ,ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ವರ್ಗಾವಣೆ ನೀತಿ ನಿಯಮಗಳನ್ನು ಸಡಿಲಿಕೆ ಮಾಡಿ ಅತೀ ಶೀಘ್ರವಾಗಿ ಸೇವಾವಧಿಯಲ್ಲಿ 1ಸಲವಾದ್ರೂ ಶಿಕ್ಷಕರನ್ನು ತಮ್ಮ ಸ್ವಂತ ತಾಲ್ಲೂಕು ಅಥವಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಕೊಟ್ಟು ಅವರ ಕಷ್ಟ ನೋವುಗಳನ್ನು ಪರಿಹರಿಸುವ  ಕಾರ್ಯ ಮಾಡಿದರೆ ಶಿಕ್ಷಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಮುಖ್ಯ ಮಂತ್ರಿಗಳಿಗೆ ಹಾಗೂ ಶಿಕ್ಷಣ ಮಂತ್ರಿಗಳಿಗೆ ಆಗ್ರಹಿಸಿದರು. 

ಈ ವೇಬಿನಾರ್ ಮೀಟಿಂಗ್ ನಲ್ಲಿ ರಾಜ್ಯದ ಮೂಲೆಮೂಲೆಯಿಂದ ಭಾಗವಹಿಸಿದ ಮಹಿಳಾ ಶಿಕ್ಷಕರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾ ಕಣ್ಣೀರಧಾರೆ ಹರಿಸಿದರು.      ಈ ಸಂದರ್ಭದಲ್ಲಿ ಗ್ರಾಮೀಣ  ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆರ್ ನಾರಾಯಣಸ್ವಾಮಿ ಚಿಂತಾಮಣಿ, ಪವಾಡಪ್ಪ ಕಾಂಬ್ಳೆ, ಶರಣಬಸವ ಬನ್ನಿಗೋಳ, ಪೀರ್ ಸಾಬ್ ನದಾಫ್ಭಾರತಿ ಶಿವನೇ  ಗಾಯತ್ರಿ ಪ್ರಕಾಶ್ ಚಂದ್ರು ಗುಬ್ಬಿ ಗುರು ತಿಗಡಿ ಅಕ್ಬರಲಿ ಸೊಲಾಪುರ್ ಸೋಮಶೇಖರ್ ಅರ್ಚನಾ ಭಟ್ ದಿವ್ಯ ಲತಾ ಪಂಡಿತ ಮೇತ್ರಿ ಮುಂತಾದ ಗುರುಗಳು, ಗುರುಮಾತೆಯರು ಭಾಗಿಯಾಗಿದ್ದರು.


Spread the love

Leave a Reply

Your email address will not be published. Required fields are marked *