Karnataka Voice

Latest Kannada News

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ಖಂಡಿಸಿ ತರಗತಿ ಬಹಿಷ್ಕಾರ: ಅಧ್ಯಕ್ಷ ಶರಣಬಸವ ಬನ್ನಿಗೋಳ

Spread the love

ಲಿಂಗಸುಗೂರು:  ಸರಕಾರಿ  ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಹಿಂಬಡ್ತಿ ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾಲಯ ಲಿಂಗಸೂಗೂರು ಇವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವ  ಬನ್ನಿಗೋಳ ಸರ್ಕಾರವು ನಮಗೆ ಸೂಕ್ತ ನ್ಯಾಯ ದೊರಕಿಸದಿದ್ದರೆ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕಾರ ಮಾಡುವುದಾಗಿ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರು ಈ ಹಿಂದೆ ನೇಮಕವಾದಾಗ ಒಂದರಿಂದ ಏಳನೇ ತರಗತಿ ಎಂದು ನೇಮಕಾತಿ ಮಾಡಿಕೊಂಡು ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ವಿವಿಧ ಪದವಿ ಹಾಗೂ ವೃತ್ತಿಪರ ಕೋರ್ಸುಗಳನ್ನು ಪಡೆದಿದ್ದಾಗಲೂ ಸೇವಾ ಹಿರಿತನ ಹಾಗೂ ಅನುಭವವನ್ನು ಪರಿಗಣಿಸದೆ ಸರ್ಕಾರವು c&r ನಿಯಮ 1) 19-05-2017 ಹಾಗೂ 2) 07-08-2017 ಪ್ರಕಾರ ರಾಜ್ಯದ ಅಂದಾಜು 80 ಸಾವಿರ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದು ತುಂಬಾ ಖೇದಕರ ಸಂಗತಿ.

ಅಲ್ಲದೇ 2005 ರಿಂದ ಇಲ್ಲಿಯವರೆಗೂ 1 ರಿಂದ 7,8 ನೇ ತರಗತಿಗಳನ್ನು ಬೋಧಿಸುತ್ತಾ ಬಂದಿದ್ದರೂ ಯಾವುದೇ ಹೆಚ್ಚಿನ ಭತ್ಯೆ ಹಾಗೂ ಬಡ್ತಿಗಳನ್ನು ನೀಡದೇ ಸರಕಾರವು ಶಿಕ್ಷಕರಿಗೆ ತುಂಬಾ ಅನ್ಯಾಯವನ್ನು ಮಾಡಿರುತ್ತದೆ ಹಾಗಾಗಿ ಈಗಿರುವ ವೃಂದಬಲ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಸೇವಾ ನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಸೇವಾ ಹಿರಿತನ ಹಾಗೂ ಪದವಿ ಗನುಗುಣವಾಗಿ 6 ರಿಂದ 8ಕ್ಕೆ ವಿಲಿನ ಮಾಡಿ ಸೂಕ್ತ ನ್ಯಾಯವನ್ನು ದೊರಕಿಸಿ ಕೊಡಬೇಕು ಹಾಗೂ ಬಿ.ಈಡಿ ಪದವಿ ಪಡೆದ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ್ -೨ ಹುದ್ದೆಗಳಿಗೆ ಬಡ್ತಿ ನೀಡಬೇಕೆಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.

ಇಲಾಖೆ ಹಾಗೂ ಸರ್ಕಾರದವರು ಸೇವಾನಿರತ ಪದವೀಧರ ಶಿಕ್ಷಕರಿಗೆ ಯಾವುದೇ ಸ್ಥಾನಮಾನ ನೀಡದೆ ಹೋದರೆ ಮುಂದಿನ ದಿನಗಳಲ್ಲಿ  ಸಾಮೂಹಿಕವಾಗಿ 6,7,8 ನೇ ತರಗತಿಯನ್ನು ಪಾಠಬೋಧನೆ ತರಗತಿ ಬಹಿಷ್ಕಾರ ಮಾಡುವುದರಿಂದಿಗೆ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ  ತಾಲೂಕಿನ ಪದವೀಧರ ಶಿಕ್ಷಕರ ವತಿಯಿಂದ  ಇಲಾಖೆಯ ಗಮನಕ್ಕೆ ತಂದರು.

ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವ ಬನ್ನಿಗೋಳ, ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಮೇಟಿ, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶರಣಬಸವ ಕೆ ಗುಡದಿನ್ನಿ, ಮುಖ್ಯಗುರುಗಳ ತಾಲೂಕಾಧ್ಯಕ್ಷ ಅಮರಪ್ಪ ಸಾಲಿ, ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಅಜಂ, ಪ.ಜಾತಿ/ ಪ.ಪಂಗಡ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹನಮೇಶ ಗೋನವಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಬಸವರಾಜ ಮ್ಯಾಗೇರಿ, ಪದವೀಧರ ಸಂಘದ ಪದಾಧಿಕಾರಿಗಳು ಹಾಗೂ ಪದವಿಧರ ಶಿಕ್ಷಕರುಗಳಾದ ಬಾಬು ಅಮರಪ್ಪ ಹೆಚ್.ಎಮ್, ರಾಜೇಂದ್ರ ಬಾಬು ರಾಜೇಂದ್ರ, ಕಾಳಪ್ಪ ಬಡಿಗೇರ್, ಪ್ರವೀಣ್ ಹುನಗುಂದ, ಮಹಮ್ಮದ್ ಯೂನಿಸ್, ಬಸವಲಿಂಗಪ್ಪ, ಮಹೇಶ್ ಕುಮಾರ್, ಮಾನಪ್ಪ, ಪರಮಪ್ಪ, ಮಲ್ಲಪ್ಪ ವಗ್ಗರ್, ಸುರೇಶ್, ನಾಗಭೂಷಣ, ಕಲ್ಲಪ್ಪ ಮಲ್ಲಿಕಾರ್ಜುನ್ ವೀರಾಪುರ, ಕಾವೇರಿ ಬಾಯಿ, ಲಚಮಣ್ಣ, ಮದನಿ ಭಾದಶಹ ಸೇರಿದಂತೆ ಹಲವರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *