ಧಾರವಾಡದಲ್ಲಿ ಭಾರೀ ಕಳ್ಳತನ- ಪಕ್ಕದ ಮನೆಗಳಿಗೆ ಬೀಗ ಹಾಕಿ ಲಕ್ಷಾಂತರ ರೂಪಾಯಿ, ಚಿನ್ನ, ಬೆಳ್ಳಿ ಲೂಟಿ…!

ಧಾರವಾಡ: ಮದುವೆ ಮನೆಯ ಸಂಭ್ರಮದಲ್ಲಿ ಭಾಗವಹಿಸಲು ಹೋಗಿದ್ದ ಮನೆಯೊಂದನ್ನ ಟಾರ್ಗೆಟ್ ಮಾಡಿರುವ ಕಳ್ಳರು, ಲಕ್ಷಾಂತರ ರೂಪಾಯಿ ನಗದು, ಚಿನ್ನ, ಬೆಳ್ಳಿ ದೋಚಿಕೊಂಡು ಹೋದ ಘಟನೆ ಧಾರವಾಡದ ಪತ್ರೇಶ್ವರನಗರದಲ್ಲಿ ನಡೆದಿದೆ.

ಗೀತಾ ನಾಯ್ಕರ ಎನ್ನುವವರ ಮನೆಯೇ ಕಳ್ಳತನವಾಗಿದ್ದು 2ಲಕ್ಷ ರೂಪಾಯಿ ನಗದು, 30 ತೊಲೆ ಬಂಗಾರ ಹಾಗೂ ನಾಲ್ಕು ಕೆಜಿ ಬೆಳ್ಳಿಯನ್ನ ದೋಚಿಕೊಂಡು ಹೋಗಲಾಗಿದ್ದು, ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ್ದಾರೆ.
ಗೀತಾ ನಾಯ್ಕರ ಎನ್ನುವವರ ಸಂಬಂಧಿಕರ ಮದುವೆ ಧಾರವಾಡದ ನಗರೇಶ್ವರ ದೇವಸ್ಥಾನದಲ್ಲಿ ಮದುವೆಯ ಕಾರ್ಯಕ್ರಮದಲ್ಲಿ ಹೋಗಿದ್ದರು. ಇವರದ್ದೆ ಒಡೆತನದ ಮನೆಗಳನ್ನ ಬಾಡಿಗೆ ಕೊಡಲಾಗಿತ್ತು.
ಕಳ್ಳರು ಅಕ್ಕಪಕ್ಕದ ಮನೆಗಳಿಗೆ ಬೀಗ ಹಾಕಿ ಯಾರೂ ಹೊರಗೆ ಬರಬಾರದೆಂದು ಜಾಣಾಕ್ಷತನ ಮೆರೆದಿದ್ದಾರೆಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಪರಿಶೀಲನೆಯನ್ನ ನಡೆಸುತ್ತಿದ್ದಾರೆ.