Posts Slider

Karnataka Voice

Latest Kannada News

16ಲಕ್ಷದ ಚಿನ್ನಾಭರಣ ದೋಚಿದ್ದ- ಜಿಮ್ಮಿ, ಮಟ್ಯಾ, ಮುತ್ತಣ್ಣ: ಹೆಡಮುರಿಗೆ ಕಟ್ಟಿದ ಪೊಲೀಸರು…!

Spread the love

ಬಾಗಲಕೋಟೆ: ಬೆಳಗಿನ ಜಾವ ಮನೆಗೆ ನಿಚ್ಚಣಿಕೆ ಹಚ್ಚಿ ಮನೆಯೊಳಗಿಳಿದು ಲಕ್ಷಾಂತರ ರೂಪಾಯಿ ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಲೋಕಾಪುರ ಗ್ರಾಮದ ಶ್ರೀನಿವಾಸ ಹನಮಂತಗೌಡ ನಿಂಗನೂರ ಎಂಬುವವರ ಮನೆಯಲ್ಲಿನ ಚಿನ್ನಾಭರಣ ದೋಚಲಾಗಿತ್ತು. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನ ನಡೆಸಿದ್ದರು.

ಬಂಧಿತ ಆರೋಪಿಗಳನ್ನ ಮುಧೋಳ ತಾಲೂಕಿನ ಮಳಲಿ ಗ್ರಾಮದ ಸಿದ್ಧು @ ಸಿದ್ದಪ್ಪ @ ಜಿಮ್ಮಿ ಅಡಿವೆವ್ವ ಹಾದಿಮನಿ, ಕಲ್ಮೇಶ @ ಮಟ್ಯಾ @ ಪುಟ್ಯಾ @ ಪುಟ್ಟು @ ಪುಟ್ಯಾ ದುರ್ಗಪ್ಪ ರಾನವ್ವಗೋಳ @ ಜಾನಮಟ್ಟಿ ಮತ್ತು ಮುತ್ತಪ್ಪ ಯಮನಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.

ಬಂಧಿತರಿಂದ 11 ಲಕ್ಷ, 2745 ರೂಪಾಯಿ ಮೌಲ್ಯದ 225 ಗ್ರಾಂ ಚಿನ್ನ ಹಾಗೂ 2260 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನ ವಶಕ್ಕೆ ಪಡೆಯಲಾಗಿದೆ. ಕಳ್ಳತನಕ್ಕೆ ಬಳಕೆ ಮಾಡಿದ ಬೈಕ್ ನ್ನ ಜಪ್ತಿ ಮಾಡಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಧೋಲ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್ಐಗಳಾದ ಶಿವಶಂಕರ ಮುಕರಿ, ದಿನೇಶ ಜವಳೇಕರ, ಕೆ.ಬಿ.ಮಾಂಗ್, ಹವಾಲ್ದಾರುಗಳಾದ ಆರ್.ಬಿ.ಕಟಗೇರಿ, ಬಾಹುಬಲಿ ಕುಸನಾಳೆ, ವಿ.ಬಿ.ತೇಲಿ, ಜಗದೀಶ ಕಾಂತಿ, ಬಿ.ಎಸ್.ದಾಸವಗೋಳ, ಪೇದೆಗಳಾದ ಎಂ.ಎನ್.ಮಾಂಗ್, ಸದಾಶಿವ ಬಡಿಗೇರ, ಜೆ.ಸಿ.ದಳವಾಯಿ, ದಾದಾಪೀರ ಅತ್ರಾವತ್ತ, ಮಲ್ಲಿಕಾರ್ಜುನ ತಂಬಾಕದ, ಬಸವರಾಜ ತಂಗಡಿ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed