Posts Slider

Karnataka Voice

Latest Kannada News

ಹೆಬಸೂರ ಸರಕಾರಿ ಶಾಲೆಯಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಚಾಲನೆ…!

Spread the love

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ವಲಯದ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಇಲಾಖೆಯ ಮಹಾತ್ವಾಕಾಂಕ್ಷೆಯಂತೆ ಜಿಲ್ಲಾ ಉಪನಿರ್ದೇಶಕ ಮೋಹನಕುಮಾರ ಹಂಚಾಟೆಯವರ ನಿರ್ದೇಶನದಂತೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗ ಅಶೋಕಕುಮಾರ ಸಿಂಧಗಿಯವರ ಮಾರ್ಗದರ್ಶನದಲ್ಲಿ ಕಳೆದ ವರ್ಷದ ಎಲ್ಲ ಪಠ್ಯ ಪುಸ್ತಕಗಳನ್ನು ಪಾಲಕರ ಮೂಲಕ ಸಂಗ್ರಹಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿತರಿಸುವ 2021-2022 ನೇ ಸಾಲಿನ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಅನುಷ್ಠಾನ ಕಾರ್ಯಚಟುವಟಿಕೆಗಳಿಗೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಪುರದಪ್ಪ ಗಾಳಿ.ಸಿ.ಆರ್.ಪಿ.ದುರ್ಗೇಶ ಮಾದರ ಚಾಲನೆ ನೀಡಿದರು.

ಮುಖ್ಯೋಪಾಧ್ಯಾಯಿನಿಯರಾದ ಎಸ್.ಎಲ್.ಬೆಟಗೇರಿ, ಹಿರಿಯ ಶಿಕ್ಷಕ ಅಶೋಕ.ಎಮ್.ಸಜ್ಜನ ಬುಕ್ ಬ್ಯಾಂಕ್ ಗೆ ಪುಸ್ತಕಗಳನ್ನು ಸ್ವೀಕರಿಸಿದರು. ಎಸ್.ಡಿಎಂಸಿ ಸದಸ್ಯರಾದ ವೆಂಣ್ಣ ತಳವಾರ, ಲಾಲಸಾಬ ಶೇಖಸನದಿ, ದೇವೇಂದ್ರ ಪತ್ತಾರ, ಮಹಾದೇವಿ ಮಾಡೊಳ್ಳಿ, ಲತಾ ಗ್ರಾಮಪುರೋಹಿತ, ಶಾರದಾ ಕಂಬಳಿ, ದ್ರಾಕ್ಷಾಯಣಿ ಕೊರಗರ, ಸುವರ್ಣ ಮಡಿವಾಳರ, ಸುಧಾ ಕೊಣ್ಣೂರ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed