‘ಹೆಬ್ಯುಚುವಲ್ ಅಪೆಂಡರ್’ ಸೇರಿ ಮೂವರನ್ನ ಬಂಧಿಸಿದ ಹಳೇಹುಬ್ಬಳ್ಳಿ ಠಾಣೆ ಪೊಲೀಸರು…!

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಆನಂದನಗರದ ಬಳಿಯ ಸೇತುವೆ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಗೋಪಾಲ ವಾಲ್ಮೀಕಿ ಎಂಬಾತನ ಮೇಲೆ ಈಗಾಗಲೇ ಹಳೇಹುಬ್ಬಳ್ಳಿ ಠಾಣೆಯಲ್ಲಿಯೇ ಎಂಟು ಪ್ರಕರಣಗಳು ಚಾಲ್ತಿಯಲ್ಲಿವೆ ಎಂದು ಹೇಳಲಾಗಿದೆ. ಈತನ ಜೊತೆಗೆ ಮಹ್ಮದ ಜಾಫರ್ ಹೆಬಸೂರ ಹಾಗೂ ಆನಂದನಗರದ ರಬ್ಬಾನಿ ಎಂಬುವವರನ್ನ ಬಂಧನ ಮಾಡಲಾಗಿದೆ.

ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಸುಖಾನಂದ ಶಿಂಧೆ, ಚಂದ್ರಶೇಖರ ಎಂ, ಸಿಬ್ಬಂದಿಗಳಾದ ಎಲ್.ವೈ.ನಾಯಕ, ಸಿ.ಎಸ್.ಹಿರೇಮಠ. ಎಸ್.ಎಸ್.ಅಡ್ನೂರ, ವಿ.ಡಿ.ಹೊಸಗೌಡರ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 400 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.