ಕಲಘಟಗಿ-ಅಳ್ನಾವರದಲ್ಲಿ ನಿತ್ಯ ದಾಸೋಹಕ್ಕೆ ಮುನ್ನುಡಿ ಹಾಕಿದ ಮಾಜಿ ಸಚಿವ ಸಂತೋಷ ಲಾಡ್…!
1 min readಕಲಘಟಗಿ: ಕೊರೋನಾ ಹೋರಾಟದಲ್ಲಿ ಯಾರೂ ಉಪವಾಸವಿರಬಾರದೆಂಬ ಸಂಕಲ್ಪ ಹೊಂದಿರುವ ಮಾಜಿ ಸಚಿವ ಸಂತೋಷ ಲಾಡ್ ಅವರು, ಕಲಘಟಗಿ ಮತ್ತು ಅಳ್ನಾವರದಲ್ಲಿ ಅನ್ನ ದಾಸೋಹಕ್ಕೆ ಮುಂದಾಗಿದ್ದಾರೆ. ತಮ್ಮ ಕರ್ಮಭೂಮಿಯಲ್ಲಿ ಯಾರೊಬ್ಬರು ಹಸಿವಿನಿಂದ ನರಳಬಾರದೆಂಬ ಉದ್ದೇಶದಿಂದ ಆರಂಭಗೊಂಡ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಕೊರೋನಾ ಸಾಂಕ್ರಾಮಿಕ ರೋಗ ಬಡವರ ಬದುಕನ್ನ ದುಸ್ತರ ಮಾಡಿದೆ. ಸರಕಾರದ ಅವ್ಯವಸ್ಥೆಯಿಂದ ಹಲವರು ಊಟವಿಲ್ಲದೇ ನರಳುತ್ತಿದ್ದಾರೆಂಬ ಭಾವನೆಯಿಂದ ಸ್ವಂತ ಖರ್ಚಿನಲ್ಲಿ ಊಟದ ವ್ಯವಸ್ಥೆಯನ್ನ ಮಾಡಿದ್ದಾರೆ.
ಏನೇಲ್ಲಾ ನಡೀತು, ಸಂತೋಷ ಲಾಡ್ ಏನು ಮಾತಾಡಿದ್ರು, ವೀಡಿಯೋ ಇಲ್ಲಿದೆ ನೋಡಿ..
ಹನ್ನೆರಡು ಮಠದ ರೇವಣಸಿದ್ದೇಶ್ವರ ಮಠದ ಸ್ವಾಮಿಗಳು, ಮಾಜಿ ಸಂಸದ ಐ.ಜಿ.ಸನದಿ, ಕಾಂಗ್ರೆಸ್ ಮುಖಂಡ ಶಾಕೀರ ಸನದಿ, ಎಸ್.ಆರ್.ಪಾಟೀಲ, ಮಂಜುನಾಥ ಮುರಳ್ಳಿ, ಹರಿಶಂಕರ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಆನಂದ ಕಲಾಲ, ಸೋಮಶೇಖರ, ಬಾಬಾಜಾನ, ಅಜ್ಮತ, ಸುಧೀರ ಸೇರಿದಂತೆ ಹಲವರು ಉಪಸ್ಥಿತರಿದ್ದರು.