ರೀ ನಿಮ್ಮ್ ಕೊರೋನಾ ರಿಪೋರ್ಟ್ ಎಲ್ಲಿ ಐತೀ: ಹುಬ್ಬಳ್ಳಿ ಪೊಲೀಸರೇನು ಮಾತಾಡಿದ್ರು ಗೊತ್ತಾ…!?

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರಿಗೆ ಆಗಾಗ, ಮಾನಸಿಕವಾಗಿ ಕಿರುಕುಳ ಕೊಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂದು ಕೂಡಾ ನಗರದ ಹೃದಯಭಾಗವಾದ ಚೆನ್ನಮ್ಮ ವೃತ್ತದಲ್ಲಿ ಅಂತಹದೇ ಒಂದು ಘಟನೆ ನಡೆದಿದೆ.
ಹುಬ್ಬಳ್ಳಿ ತಾಡಪತ್ರಿ ಗಲ್ಲಿಯ ನಿವಾಸಿಯೊಬ್ಬರು ಕಾರಲ್ಲಿ ಚೆನ್ನಮ್ಮ ವೃತ್ತದ ಮೂಲಕ ಹೋಗುತ್ತಿದ್ದ ಸಮಯದಲ್ಲಿ ಪೊಲೀಸರು ತಪಾಸಣೆಗೆ ನಿಲ್ಲಿಸುವಂತೆ ಹೇಳಿದಾಗಲೂ, ಮುಂದೆ ವಾಹನವನ್ನ ಬಿಡುತ್ತಲೇ ನಡೆದರು. ಇಡೀ ಡ್ರಾಮ ಮತ್ತು ಮಹಿಳೆಯ ನಡೆಯ ವೀಡಿಯೋ ಇಲ್ಲಿದೆ ನೋಡಿ.
ತಮ್ಮ ಜೀವನದ ಹಂಗು ತೊರೆದು ಜನರ ಬದುಕನ್ನ ಹಸನಾಗಿಸಲು ಪ್ರತಿ ಕ್ಷಣ ರಸ್ತೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಈ ಥರ ಮಾತನಾಡಿ, ಶಾಣ್ಯಾತನ ಪ್ರದರ್ಶನ ಮಾಡುವುದಲ್ಲದೇ, ಅವರ ಮನಸ್ಸಿಗೆ ಬೇಸರ ಮಾಡುವುದು ಎಂತಹದ್ದು..