ಮನೆಗೆ ನುಗ್ಗಿದ್ದ ಮೊಬೈಲ್ ಕಳ್ಳನನ್ನ ಹಿಡಿದು ಕೊಟ್ಟ ಮಾಲೀಕರು…!

ಹುಬ್ಬಳ್ಳಿ: ಎಲ್ಲರೂ ಮಲಗಿದ ಸಮಯದಲ್ಲಿ ಕಿಡಕಿಯ ಮೂಲಕ ಮೊಬೈಲ್ ಕದಿಯಲು ಬಂದಿದ್ದ ಕಳ್ಳನನ್ನ ಮನೆಯವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದೆ.

ಸೆಟ್ಲಮೆಂಟ್ ಗಂಗಾಧರನಗರದ ನಿವಾಸಿ ಓಂಕಾರ ಎಂಬುವವನೇ ಮೊಬೈಲ್ ಕಳ್ಳತನ ಮಾಡಲು, ವೀರಾಪುರ ಓಣಿಯ ಮನೆಯೊಂದಕ್ಕೆ ನುಗ್ಗಿದ್ದ. ಈ ಸಮಯದಲ್ಲಿ ಮಾಲೀಕರು, ಎಚ್ಚೆತ್ತಗೊಂಡು ಚಾಣಾಕ್ಷತನದಿಂದ ಆರೋಪಿಯನ್ನ ಹಿಡಿದಿದ್ದಾರೆ.
ಆರೋಪಿ ಓಂಕಾರನನ್ನ ಬೆಂಡಿಗೇರಿ ಠಾಣೆಯ ಪೊಲೀಸರು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಆರೋಪಿ ಬೇರೆ ಮನೆಯಲ್ಲೂ ಕನ್ನ ಹಾಕಿರುವ ಶಂಕೆಯಿದ್ದು, ಆರಕ್ಷಕರು ತನಿಖೆಯನ್ನ ಮುಂದುವರೆಸಿದ್ದಾರೆ.