ಮನೆ ಬಿಟ್ಟು ನಮಗಾಗಿ ಬೀದಿಯಲ್ಲಿದ್ದಾರೆ- ಪೊಲೀಸರ ಜೊತೆ ಕೈಜೋಡಿಸಿ: ಬಹು ಭಾಷಾ ನಟ ಚರಣರಾಜ್

ಬೆಂಗಳೂರು: ಉತ್ತರ ಕರ್ನಾಟಕ ಮೂಲದ ಬಹುಭಾಷಾ ನಟ ಚರಣರಾಜ್ ಅವರು ಕರ್ನಾಟಕ ಪೊಲೀಸರ ಕಾರ್ಯವನ್ನ ಶ್ಲಾಘಿಸಿದ್ದು, ಅವರ ಜೊತೆ ಕೈ ಜೋಡಿಸಿ ಎಂದು ಸಾರ್ವಜನಿಕರಲ್ಲಿ ಮನವಿಯನ್ನ ಮಾಡಿಕೊಂಡಿದ್ದಾರೆ.
ಕೊರೋನಾ ಮಹಾಮಾರಿ ಹಲವು ಮನೆಗಳ ನೆಮ್ಮದಿಯನ್ನ ಹಾಳು ಮಾಡಿದೆ. ಇಂತಹ ಮಾರಕ ಸಮಯದಲ್ಲೂ ಮನೆಯನ್ನ ಬಿಟ್ಟು ಜನರಿಗಾಗಿ ಬೀದಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರೊಂದಿಗೆ ನಾವೆಲ್ಲರೂ ಸಾಥ್ ಕೊಡಬೇಕೆಂದು ಹೇಳಿದರು.
ವೀಡಿಯೋ ಇಲ್ಲಿದೆ ನೋಡಿ..
ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರಿಗೆ ತಂಪು ಪಾನೀಯ ಹಾಗೂ ಬಿಸ್ಕೀತಗಳನ್ನ ನೀಡಿದ ಚರಣರಾಜ್, ಎಲ್ಲರೂ ಮನೆಯಲ್ಲಿದ್ದು ಕೊರೋನಾ ಓಡಿಸಲು ಕೈ ಜೋಡಿಸಿ ಎಂದರು.