ಅಯ್ಯೋ, ದೇವರೇ.. ಹುಬ್ಬಳ್ಳಿ ಪೊಲೀಸರನ್ನ ನೀನೇ ಕಾಪಾಡಬೇಕು…!

ಹುಬ್ಬಳ್ಳಿ: ಕೊರೋನಾ ಮಹಾಮಾರಿಯ ಆರ್ಭಟ ದಿನವೂ ಮನಷ್ಯರ ನೆಮ್ಮದಿಯನ್ನ ಹಾಳು ಮಾಡುತ್ತಿದ್ದರೂ, ಯಾವುದೇ ರೀತಿಯ ಆತಂಕವಿಲ್ಲದೇ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸರು ಪ್ರತಿಕ್ಷಣವೂ ವಾಣಿಜ್ಯನಗರಿಯಲ್ಲಿ ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ರಾಜಕಾರಣಿಗಳಿಂದ ಹಿಡಿದು ಚಿಲ್ಟು-ಪಲ್ಟುಗಳ ಜೊತೆನೂ ತಲೆಯನ್ನ ಕೆಡಿಸಿಕೊಳ್ಳಬೇಕಾಗತ್ತೆ. ನಿಯಮ ಮೀರಿ ನಡೆದರೇ, ಏನು ಮಾಡಬೇಕು ಎಂಬ ಪ್ರಶ್ನೆ ಅವರನ್ನ ಸದಾಕಾಲ ಕಾಡುತ್ತಲೇ ಇರತ್ತೆ. ಅಂಥಹದರಲ್ಲಿ ತೀರಾ ಅಪರೂಪದ ಪ್ರಕರಣವೊಂದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ನೀವೇ ನೋಡಿ.. ಪೊಲೀಸರ ಬಗ್ಗೆ ಕಾಳಜಿ ಹೊಂದಿ..
ಎಕ್ಸಕ್ಲೂಸಿವ್ ರಿಪೋರ್ಟ್..
ಕಾನೂನು ಪಾಲನೆ ಮಾಡುವ ಸಮಯದಲ್ಲಿ ಹಲವು ಯಡವಟ್ಟಿಗರು ಬಂದು ಪೊಲೀಸರನ್ನ ಮತ್ತಷ್ಟು ಅಸಹನೀಯ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೇಲ್ಲ ಕಡಿವಾಣ ಹಾಕಬೇಕು ಎನ್ನುವುದಾದರೇ ಜನರೇ ಜಾಗೃತರಾಗಬೇಕು. ಪೊಲೀಸರಿಗೆ ಸಹಕಾರ ನೀಡದೇ ಹೋದಲ್ಲಿ ಲಾಕ್ ಡೌನ್ ಮಾಡಿಯೂ, ಕೊರೋನಾವನ್ನ ಹಿಮ್ಮೆಟ್ಟಿಸಲು ಸಾಧ್ಯವೇ ಇಲ್ಲ ಬಿಡಿ.