ನಾಳೆಯಿಂದ ಏಳು ದಿನ ನವಲಗುಂದ ಸಂಪೂರ್ಣ ಲಾಕ್ ಡೌನ್…!

ನವಲಗುಂದ: ಪಟ್ಟಣದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 20ರಿಂದ ಮೇ 26ರ ವರೆಗೆ ಏಳು ದಿನಗಳವರೆಗೆ ನವಲಗುಂದ ಪಟ್ಟಣವನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಾಲೂಕು ದಂಡಾಧಿಕಾರಿಗಳು ತಿಳಿಸಿದ್ದಾರೆ.
ತಹಶೀಲ್ದಾರ ಆದೇಶದ ಹಿನ್ನೆಲೆಯಲ್ಲಿ ನವಲಗುಂದ ಪಟ್ಟಣದಲ್ಲಿ ಇಂದು ಜಾತ್ರೆಯ ರೀತಿಯಲ್ಲಿ ಜನರು ಸೇರಿ, ತರಕಾರಿ ಹಾಗೂ ದಿನನಿತ್ಯದ ಸರಕು-ಸರಂಜಾಮನ್ನ ಖರೀದಿ ಮಾಡಿದರು.

ನಿಗದಿತ ಸಮಯದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೂ ಕೂಡಾ ಕೊರೋನಾ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ನವಲಗುಂದ ವರ್ತಕರು ಸ್ವಯಂ ಘೋಷಣೆ ಮಾಡಿಕೊಂಡ ಬೆನ್ನಲ್ಲೇ ಈ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ.
ತಹಶೀಲ್ದಾರ ಆದೇಶದ ಹಿನ್ನೆಲೆಯಲ್ಲಿ ನವಲಗುಂದ ಪಟ್ಟಣಕ್ಕೆ ಯಾರೂ ಬರದಂತೆ ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೂ ಕಾರ್ಯನಿರ್ವಾಹಕ ಅಧಿಕಾರಿಗಳು ನೋಟೀಸ್ ಜಾರಿಗೊಳಿಸಿದ್ದಾರೆ.