ದೇವರಂಥ ಮನುಷ್ಯ “ಶ್ರೀಧರ ಪತ್ತಾರ” ಇನ್ನಿಲ್ಲ…!

ಹುಬ್ಬಳ್ಳಿ: ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮತ್ತೂ ಪ್ರತಿಯೊಂದು ಶಿಕ್ಷಕರ ಒಡನಾಡಿಯಾಗಿದ್ದ ಹುಬ್ಬಳ್ಳಿ ಶಹರ ಮತ್ತು ಹುಬ್ಬಳ್ಳಿ ಗ್ರಾಮೀಣ ಭಾಗದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ.

ಬದ್ಧತೆ, ಬುದ್ಧತೆ, ಪ್ರಭುದ್ಧತೆ ಬಗ್ಗೆ ಸದಾಕಾಲ ಮಾಡುತ್ತಲೇ ಎಲ್ಲರೊಂದಿಗೂ ಉತ್ತಮವಾಗಿ ನಡೆದುಕೊಳ್ಳುತ್ತಿದ್ದ ಶ್ರೀಧರ ಅವರು ಕೊರೋನಾಗೆ ಬಲಿಯಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಶ್ರೀಧರ ಅವರ ಸಾವಿನ ಸುದ್ಧಿ ಶಿಕ್ಷಕ ವಲಯದಲ್ಲಿ ತೀವ್ರ ಥರದ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಕೋರಿರುವ ಶಿಕ್ಷಕ ಸಮೂಹ, ಅವರ ಅಗಲಿಕೆಯನ್ನ ತಡೆದುಕೊಳ್ಳುವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.