ನವಲಗುಂದದಲ್ಲಿ ಪೋಟೊ ಸ್ಟುಡಿಯೋ ಕಳ್ಳತನ…!

ನವಲಗುಂದ: ಪಟ್ಟಣದ ಜನನಿಬೀಡ ಪ್ರದೇಶದಲ್ಲಿರುವ ಪೋಟೊ ಸ್ಟುಡಿಯೋವೊಂದರ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಬೆಲೆಬಾಳುವ ಕ್ಯಾಮರಾ ಹಾಗೂ ಪರಿಕರಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಸುರೇಶ ಯಮನಾಸಾ ಭಾಂಡಗೆ ಮಾಲಿಕತ್ವದ ಸುಧಾ ಡಿಜಿಟಲ್ ಸ್ಟುಡಿಯೋದಲ್ಲಿ ಕಳ್ಳತನ ನಡೆದಿದೆ. ಲಕ್ಷಾಂತರ ಬೆಲೆ ಬಾಳುವ ಕ್ಯಾಮರಾ, ಲೆನ್ಸ್ ದೋಚಿಕೊಂಡು ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ, ಎಲ್ಲ ಕ್ಯಾಮರಾಗಳನ್ನ ಸ್ಟುಡಿಯೋದಲ್ಲಿಯೇ ಇಡಲಾಗಿತ್ತು. ಅಷ್ಟೇ ಅಲ್ಲ, ಬೆಲೆಬಾಳುವ ಲೆನ್ಸಗಳು ಜೊತೆಗಿದ್ದವು. ಅವುಗಳೆಲ್ಲವನ್ನೂ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಬೆರಳಚ್ಚುಗಾರರನ್ನ ಕರೆಯಿಸಿ ಮಾಹಿತಿಯನ್ನ ಸಂಗ್ರಹಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.