Posts Slider

Karnataka Voice

Latest Kannada News

ಹೆಚ್ಚಿನ ದರದಲ್ಲಿ ಆಕ್ಸಿಮೀಟರ್ ಮಾರಾಟ: ಐದು ಮೆಡಿಕಲ್ ಗಳ ವಿರುದ್ಧ ಮೊಕದ್ದಮೆ…!

Spread the love

ಹುಬ್ಬಳ್ಳಿ-ಧಾರವಾಡ: ಅವಳಿನಗರದಲ್ಲಿ ಆಕ್ಸಿಮೀಟರ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ಹೆಚ್ಚಿನ ದರಕ್ಕೆ  ಮಾರುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ನಗರದ ಔಷಧ ಅಂಗಡಿಗಳಲ್ಲಿ ತಪಾಸಣೆ ನಡೆಸಿದರು.

ಆಕ್ಸಿ ಮೀಟರ್ ಪೊಟ್ಟಣಗಳ ಮೇಲೆ ಕಾನೂನು ಮಾಪನ ಶಾಸ್ತ್ರ ಕಾಯಿದೆ ಅನ್ವಯ ನಿಗದಿತ ಮಾಹಿತಿಗಳನ್ನು ಮುದ್ರಿಸದೇ ಮಾರಾಟಕ್ಕೆ ಇಟ್ಟ ಹಿನ್ನಲೆಯಲ್ಲಿ ಐದು ಅಂಗಡಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಯಿತು.

ಕಾಯಿದೆಗಳ ಬಗ್ಗೆ ಎಲ್ಲ ಅಂಗಡಿಕಾರರಿಗೆ ತಿಳಿಸಿ ಹೇಳಲಾಯಿತು, ಅಲ್ಲದೆ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳುವದಾಗಿ ಎಚ್ಚರಿಕೆಯನ್ನ ನೀಡಲಾಯಿತು.                    

ಕಾರ್ಯಾಚರಣೆಯಲ್ಲಿ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ನಿಯಂತ್ರಕ ಮಧುಕರ.ರಾ. ಘೋಡಕೆ, ನಿರೀಕ್ಷಕ ಸಿದ್ದಪ್ಪ ಪೂಜಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.  ಇನ್ನು ಮುಂದೆ ನಿಯಮಿತವಾಗಿ ತಪಾಸಣೆಗಳನ್ನು ಕೈಗೊಳ್ಳುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *