Karnataka Voice

Latest Kannada News

ಈ ಬಾರಿ SSLC ಪರೀಕ್ಷೆ ನಡೆಯೋದು ಡೌಟಾ: ಸಚಿವ ಸುರೇಶಕುಮಾರ ಮಾತನಾಡಿದ್ದಾರೆ ನೋಡಿ…!

Spread the love

ಬೆಂಗಳೂರು: ಜೂನ್ 21 ರಿಂದ ಪ್ರಾರಂಭವಾಗಬೇಕಿರುವ ಎಸ್.ಎಸ್‌.ಎಲ್.ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.

ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು, ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೋವಿಡ್19ರ ಎರಡನೇ‌ ಅಲೆಯ ಪ್ರಸರಣ ಸಂಪೂರ್ಣ ತಹಬಂದಿಗೆ ಬಂದ ಸಂದರ್ಭದಲ್ಲಿ,  ಸಾಕಷ್ಟು ಮುಂಚಿತವಾಗಿ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ವಿಚಲಿತರಾಗದೇ ಏಕಾಗ್ರತೆಯಿಂದ‌ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕು, ಪರೀಕ್ಷೆಯ ಕುರಿತಂತೆ ಯಾವುದೇ ಕಾರಣಕ್ಕೂ ಆತಂಕಕ್ಕೊಳಗುವ ಅವಶ್ಯಕತೆ ಇಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಮಾನ್ಯ ಆಯುಕ್ತರು ಸಾ.ಶಿ.ಇಲಾಖೆ ಬೆಂಗಳೂರು ಇವರ ಸಭೆಯ‌ಮುಖ್ಯಾಂಶಗಳು

ದಿನಾಂಕ: 13=05=2021 ರಂದು ಬೆಳಿಗ್ಗೆ 11=00ಕ್ಕೆ ನಡೆಸಿದ ವೆಬಿನಾರ್ ಸಭೆಯಲ್ಲಿ ಮಾನ್ಯ ಆಯುಕ್ತರು ಸಾ.ಶಿ.ಇಲಾಖೆ ಬೆಂಗಳೂರು ರವರು ನೀಡಿದ ಸೂಚನೆಗಳು.
ಈ ಕರೋನಾದಿಂದ ನಮ್ಮ ಇಲಾಖೆಯಿಂದಲೇ ಇನ್ನೂರಕ್ಕೂ ಹೆಚ್ಚು ಜನರು ಅಧಿಕಾರಿಗಳು,ಶಿಕ್ಷಕರು, ಸಿಬ್ಬಂಧಿಯವರು ಅಸುನಿಗಿರುವುದು ದೊಡ್ಡ ದುರಂತವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ ಆರಂಭದಲ್ಲಿ ಆಯುಕ್ತರು ಸಾಂತ್ವನದ ಮಾತು ನುಡಿದರು.
ನಂತರ ಸಭೆಯನ್ನು ಆರಂಭಿಸಿದರು.
೧) ದಿನಾಂಕ ೧೮-೫-೨೦೨೧ರೊಳಗಾಗಿ ೧-೯ನೇ ತರಗತಿ ಮೌಲ್ಯಾಂಕನ ಮಾಡಿದ್ದನ್ನು ಸರಕಾರಿ,ಅನುದಾನಿತ,ಅನುದಾನರಹಿತ ಶಾಲೆಗಳವರು ಎಸ್.ಎ.ಟಿ.ಎಸ್.ನಲ್ಲಿ ದಾಖಲಿಸಿ ಶೇ.೧೦೦% ಪ್ರಮಾಣ ಸಾಧಿಸಬೇಕು.
೨) ಫೀ ವಸೂಲಾತಿ ಬಾಕಿ ಇರುವುದೆಂದು ಯಾವುದೇ ಒಂದು ವಿದ್ಯಾರ್ಥಿಗಳ ಫಲತಾಂಶ ಘೋಷಣೆ ಆಗದಿರಕೂಡದು. ಅಂತ ಶಾಲೆಗಳ ಮೇಲೆ ಕ್ರಮಕ್ಕಾಗಿ ಬಿಇಓ ರವರು ಡಿಡಿಪಿಐ ರವರಿಗೆ ವರದಿ ಎರಡು ದಿನದೊಳಗೆ ಮಾಡಲಿ.
೩) ದಿನಾಂಕ: ೨೧-೫-೨೦೨೧ ರಂದು ಮತ್ತೊಮ್ಮೆ ಇಂದಿನ ಅಜೆಂಡಾ ವಿಷಯಗಳನ್ನು ಪ್ರಗತಿ ಪರಿಶೀಲಿಸಲು ವಿಡಿಯೋ ಕಾನ್ಪರೆನ್ಷ ಮಾಡಲಾಗುತ್ತದೆ.
೪) ಡಿಡಿಪಿಐ ಮತ್ತು ಡಯಟ್ ಪ್ರಾಂಶುಪಾಲರು ಸೇರಿ ತಮ್ಮ ಕೆಳಹಂತದ ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ಮಾಡಿರಿ ಆನ್ ಲೈನ್ ಮೂಲಕ ಶಿಕ್ಷಣ ಕೊಡುವ ವಿಧಾನದ ಬಗ್ಗೆ ಒಂದೊಂದು ತರಗತಿ,ಒಂದೊಂದು ವಿಷಯಗಳ ಬಗ್ಗೆ ಚಿಂತನೆ ಮಾಡಿರಿ, ಒಂದು ವಿಶ್ಲೇಷಣಾತ್ಮಕ ವರದಿ ಸಿದ್ದಪಡಿಸಿರಿ.
೫) ತಮ್ಮ ಮತ್ತು ನಿಮ್ಮೆಲ್ಲರ ಕುಟುಂಬದವರ ಹಾಗೂ ಎಲ್ಲ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಜಾಗ್ರತೆ ಇರಲಿ. ಸಭೆಯಲ್ಲಿ ನಿರ್ದೇಶಕರು ಪ್ರಾಥಮಿಕ,ಪ್ರೌಢ ರವರು ಆಯುಕ್ತರ ಜೊತೆಗೆ ಉಪಸ್ತಿತರಿದ್ದರು.
ಎಲ್ಲಾ ಡಿಪಿಐಗಳು ಜಿ ಲ್ಲಾ ನೋಡಲ್ ಅಧಿಕಾರಿಗಳು ಹಾಜರಿದ್ದರು.


Spread the love

Leave a Reply

Your email address will not be published. Required fields are marked *