ಧಾರವಾಡ ಡಿಡಿಪಿಐ ಸಾಹೇಬ್ರೇ.. ನಿಮಗೆ ಇರೋದು ಯಾರ್ ಬಗ್ಗೆ ಕಾಳಜಿ…!

ಧಾರವಾಡ: ರಾಜ್ಯ ಸರಕಾರ ಕೊರೋನಾ ಪ್ರಕರಣಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಸೋಮವಾರದಿಂದ ಮತ್ತಷ್ಟು ನಿಯಮಗಳನ್ನ ಹೆಚ್ಚು ಮಾಡಿದ್ದು, ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನ ಹೊಂದಿದೆ. ಆದರೆ, ಧಾರವಾಡದ ಡಿಡಿಪಿಐ ಅವರ ನಿರ್ಧಾರಗಳು ಸೋಜಿಗವನ್ನ ಮೂಡಿಸುತ್ತಿವೆ.

ಹೌದು.. ಸರಕಾರ ಈಗಾಗಲೇ ಶಾಲೆಗಳಿಗೆ ಬೇಸಿಗೆ ರಜೆಯನ್ನೂ ನೀಡಿದೆ. ಯಾರೂ ವಿನಾಕಾರಣ ಹೊರಗೆ ಬರಬಾರದೆಂದು ಆದೇಶವನ್ನೂ ಮಾಡಲಾಗಿದೆ. ಆದರೆ, ಸೋಮವಾರದಿಂದ ಶಿಕ್ಷಕರಿಗೆ ದವಸ ಧಾನ್ಯ ಹಂಚಲು ಶಾಲೆಗೆ ಹೋಗುವಂತೆ ಮಾಡಲಾಗುತ್ತಿದೆ.
ಶಾಲೆಗೆ ಮಕ್ಕಳನ್ನ ಕರೆಸಿ, ಅವರುಗಳಿಗೆ ಆಹಾರ ಧಾನ್ಯವನ್ನ ಕೊಡಲು ಇಸ್ಕಾನ್ ಮುಂದಾಗಿದ್ದು, ಅವುಗಳ ವಿತರಣೆಗೆ ಸಮಯವನ್ನ ನಿಗದಿ ಮಾಡಲಾಗಿದೆ. ಇದು ಯಾವ ನ್ಯಾಯ ಡಿಡಿಪಿಐ ಮೋಹನಕುಮಾರ ಹಂಚಾಟೆಯವರೇ.

ಶಿಕ್ಷಕರು ದಿನ ನಿತ್ಯ ಹಲವು ಪ್ರದೇಶಗಳಲ್ಲಿ ಕೊರೋನಾದಿಂದ ಬಲಿಯಾಗುತ್ತಿದ್ದಾರೆ. ಸಂಚಾರ ಮಾಡಲು ಬಸ್ ವ್ಯವಸ್ಥೆ ಕೂಡಾ ಇಲ್ಲಾ. ಇಂತಹದರಲ್ಲಿ ಮತ್ತೆ ಹೋಗಿ ಹೋಗಿ ಎನ್ನುತ್ತಿರುವುದಕ್ಕೆ ನಿಜವಾದ ಕಾರಣವಾದರೂ ಏನೂ. ನೀವು ಶಿಕ್ಷಣ ಇಲಾಖೆಯ ಜಿಲ್ಲೆಯ ಪ್ರಮುಖರು, ಶಿಕ್ಷಕರ ಪರವಾಗಿ ನಿಮಗೊಂದು ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲವೇ..