ರಾಜ್ಯದಲ್ಲಿ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್…!
1 min readಬೆಂಗಳೂರು: ರಾಜ್ಯದಲ್ಲಿ ಹದಿನಾಲ್ಕು ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಿದ್ದು, ರಾಜ್ಯ ಬಹುತೇಕ್ ಬಂದ್ ಆಗಲಿದ್ದು, ಕೊರೋನಾ ಎರಡನೇಯ ಅಲೆಯ ಅಬ್ಬರಕ್ಕೆ ಅಂತ್ಯ ಹಾಡುವ ಕ್ರಮಕ್ಕೆ ಸರಕಾರ ಮುಂದಾಗಿದೆ.
ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಘೋಷಣೆ ಮಾಡಿದ್ದು, ಅವಶ್ಯಕ ಹದಿನೆಂಟು ಇಲಾಖೆಯ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುವುದಾಗಿ ಮಾಹಿತಿಯನ್ನ ನೀಡಿದ್ದಾರೆ.
ಅಗತ್ಯ ವಸ್ತುಗಳಿಗೆ ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಅವಕಾಶ. ಹಾಲು ಸಂಜೆಯವರೆಗೆ ಇರತ್ತೆ. ಹೊಟೇಲ್ ನಲ್ಲಿ ಪಾರ್ಸಲ್ ತರಿಸಿಕೊಳ್ಳುವ ಅವಕಾಶವಿದೆ. ಹತ್ತು ಗಂಟೆಯ ನಂತರ ಒಬ್ಬರೂ ರಸ್ತೆಯಲ್ಲಿ ಇರದ ಹಾಗೇ ನೋಡಿಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಹೊಟೇಲ್ ಗೆ ಹೋಗಬೇಕೆಂದರೇ ನಡೆದುಕೊಂಡು ಹೋಗಿ ಪಾರ್ಸಲ್ ತರಬಹುದೇ ವಿನಃ, ವಾಹನವನ್ನ ತೆಗೆದುಕೊಂಡು ಹೋಗುವ ಹಾಗಿಲ್ಲ.
ಕಟ್ಟಡ ಕಾಮಗಾರಿ ಅವಕಾಶ ನೀಡಲಾಗಿದೆಯಾದರೂ, ಸ್ಥಳದಲ್ಲಿ ಇದ್ದೂ ಕಾರ್ಯ ಮಾಡಬೇಕು. ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ.