ಶಾಸಕ ಅಮೃತ ದೇಸಾಯಿ ಅವರಿಗೆ ಕೊರೋನಾ ಪಾಸಿಟಿವ್…!

ಧಾರವಾಡ: ಭಾರತೀಯ ಜನತಾ ಪಕ್ಷದ ಧಾರವಾಡ-71 ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಹೋಮ್ ಐಸೋಲೇಷನಗೆ ಒಳಗಾಗಿದ್ದಾರೆ.
ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿಯ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಸಿಕೊಂಡಾಗ, ಕೊರೋನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ.

ಶಾಸಕ ಅಮೃತ ದೇಸಾಯಿ ಅವರು ಫೇಸ್ ಬುಕ್ ಲ್ಲಿ ಬರೆದುಕೊಂಡಿದ್ದು ಹೀಗೆ…!
ನಾನು ಇಂದು ಕೋವಿಡ್-19 ರ ಟೆಸ್ಟ್ ಮಾಡಿಸಿದ್ದು ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ, ವೈದ್ಯರು 14 ದಿನ ಹೋಮ ಐಸೋಲೇಷನಲ್ಲಿರಲು ತಿಳಿಸಿರುತ್ತಾರೆ. ಆದ್ದರಿಂದ ಇನ್ನೂ ಸ್ವಲ್ಪ ದಿನಗಳ ಮಟ್ಟಿಗೆ ನೇರ ಸಂಪರ್ಕ ಬೇಡ ದೂರವಾಣಿಗಳು ಮೂಲಕ ಸಂಪರ್ಕದಲ್ಲಿರೋಣ
ತಾವು ಆರೋಗ್ಯದ ಕಡೆಗೆ ನಿಗಾವಹಿಸಿ ತಾವು ಸುರಕ್ಷಿತವಾಗಿರಿ ತಮ್ಮ ಕುಟುಂಬದವರನ್ನು ಸುರಕ್ಷಿತವಾಗಿರಿಸಿ ಎಂದು ವಿನಂತಿಸುತ್ತೇನೆ. ಆದಷ್ಟು ಬೇಗ ಗುಣಮುಖನಾಗಿ ಎಂದಿನಂತೆ ತಮ್ಮ ಸೇವೆಯಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ.
ತಮಗೂ ರೋಗದ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಸ್ಯತೋರದೆ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯಿರಿ.