Karnataka Voice

Latest Kannada News

ಅಬ್ಬರಿಸಿ ಬೊಬ್ಬಿರಿದಿದ್ದ ಕಲ್ಲಪ್ಪ ಶಿರಕೋಳ ಸ್ವಿಚ್ ಆಫ್…!

Spread the love

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೊಟೇಲ್ ನಲ್ಲಿ ಮ್ಯಾನೇಜರನನ್ನ ಚಹಾ ಕೊಡುವ ವಿಷಯವಾಗಿ ಹಿಗ್ಗಾ-ಮುಗ್ಗಾ ಥಳಿಸಿದ್ದ ರೌಡಿಯೋರ್ವ ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದ ಹಾಗೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಕಳೆದ ಮೂರು ದಿನದ ಹಿಂದೆ ಕಲ್ಲಪ್ಪ ಶಿರಕೋಳ ತನ್ನ ಸಹಚರನೊಂದಿಗೆ ಹೊಟೇಲ್ ನಲ್ಲಿ ಚಹಾಗೆ ಆರ್ಡರ್ ಮಾಡಿದ್ದ. ಬೇರೆ ಗ್ರಾಹಕರು ಬಂದ ಹಿನ್ನೆಲೆಯಲ್ಲಿ ಈತನಿಗೆ ಚಹಾ ಕೊಡುವುದು ತಡವಾಗಿತ್ತು. ಅದನ್ನೇ ನೆಪ ಮಾಡಿಕೊಂಡ ರೌಡಿ ಕಲ್ಲಪ್ಪ ಶಿರಕೋಳ, ಕೈ ಲಾಗದವನನ್ನ ಮನ ಬಂದಂತೆ ಥಳಿಸಿದ್ದನು.

ಇಡೀ ಘಟನೆಯೂ ಹೊಟೇಲಿನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿ ಅದು ವೈರಲ್ ಕೂಡಾ ಆಗಿತ್ತು. ತದನಂತರ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ನಂತರ ಕಲ್ಲಪ್ಪನ ಮೊಬೈಲ್ ಸ್ವಿಫ್ ಆಗಿದೆ.

ಲಾಕ್ ಡೌನ್ ಸಮಯದಲ್ಲಿಯೂ ತನ್ನ ಛಾಳಿಯನ್ನ ಬಿಡದ ರೌಡಿಯನ್ನ ಉಪನಗರ ಠಾಣೆಯ ಪೊಲೀಸರು ಹುಡುಕುತ್ತಿದ್ದು, ಈ ಬಗ್ಗೆ ಯಾರಾದರೂ ಗಮನಕ್ಕೆ ಬಂದರೇ ಪೊಲೀಸರಿಗೆ ಗುಪ್ತ ಮಾಹಿತಿಯನ್ನ ಕೊಡಬಹುದಾಗಿದೆ.


Spread the love

Leave a Reply

Your email address will not be published. Required fields are marked *