ಜಿಪಂ-ತಾಪಂ ಚುನಾವಣೆ ಮುಂದೂಡಲು ಚು-ಆಯೋಗಕ್ಕೆ ಸರಕಾರದ ಪತ್ರ…!
1 min readಬೆಂಗಳೂರು: ಕೋವಿಡ್-19 ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳನ್ನ ಆರು ತಿಂಗಳವರೆಗೆ ಮುಂದೂಡುವಂತೆ ರಾಜ್ಯ ಸರಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರವನ್ನ ಬರೆದು ವಿನಂತಿಸಿದೆ.
2016-21 ರ ಜಿಲ್ಲಾ ಪಂಚಾಯತಿ ಅವಧಿಯು ಮುಕ್ತಾಯಗೊಳ್ಳಲಿದೆ. ಆಗಸ್ಟ್ ವರೆಗೆ ತಾಲೂಕು ಪಂಚಾಯತಿ ಅವಧಿ ಕೂಡಾ ಮುಕ್ತಾಯಗೊಳ್ಳಲಿದೆ. ಆದರೆ, ರಾಷ್ಟ್ರವ್ಯಾಪ್ತಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೂಡಾ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲವೆಂದು ಚುನಾವಣಾ ಆಯೋಗಕ್ಕೆ ಸರಕಾರ ಮಾಹಿತಿ ನೀಡಿದೆ.
ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳನ್ನ ಆರು ತಿಂಗಳ ಅವಧಿಗೆ ಮುಂದೂಡುವ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮವನ್ನ ಜರುಗಿಸುವಂತೆ ಕೋರಲಾಗಿದೆ.
ಈ ಚುನಾವಣೆಯ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ, ಸಂಘ ಸಂಸ್ಥೆಗಳು, ನೋಂದಾಯಿತ ಸೊಸೈಟಿಗಳ/ ಉಪಚುನಾವಣೆಗಳು ಸೇರಿದಂತೆ ಇನ್ನುಳಿದ ಚುನಾವಣೆಗಳನ್ನೂ 6 ತಿಂಗಳು ಮುಂದೂಡುವ ಬಗ್ಗೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದ್ದು, ಅದರಂತೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.