ಪಬ್ಲಿಕ್ ಟಿವಿ ಆ್ಯಂಕರ ಅರುಣ ಬಡಿಗೇರ ತಾಯಿ ವಿಧಿವಶ…!

ಹುಬ್ಬಳ್ಳಿ: ಕೆಲವು ದಿನಗಳಿಂದ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಬ್ಲಿಕ್ ಟಿವಿ ನ್ಯೂಸ್ ಆ್ಯಂಕರ ಅರುಣ ಬಡಿಗೇರ ಅವರ ತಾಯಿ ಬೆಳಿಗ್ಗೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಅರುಣ ಅವರ ತಾಯಿಯಾದ ಕಸ್ತೂರೆಮ್ಮ ಚಂದ್ರಶೇಖರ ಬಡಿಗೇರ ಅವರು ಮಗಳ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಹೋಗಿ ಅನಾರೋಗ್ಯಗೊಂಡಿದ್ದರು. ಆರೋಗ್ಯದಲ್ಲಿ ತೀವ್ರ ಥರದ ಏರುಪೇರಾಗಿದ್ದರಿಂದ ಅವರನ್ನ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಲಾಗಿತ್ತು.
ಇಬ್ಬರು ಗಂಡು, ಒಂದು ಹೆಣ್ಣು ಮಗಳನ್ನ ಹೊಂದಿದ್ದ ಕಸ್ತೂರೆಮ್ಮ ಬಡಿಗೇರ ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿಯೇ ನಡೆಯಲಿದೆ. ಗ್ರಾಮೀಣ ಪ್ರದೇಶದಿಂದ ಬಂದ ಕಸ್ತೂರೆಮ್ಮ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅವರ ನಿಧನದ ಸುದ್ದಿ ತೀವ್ರ ಬೇಸರ ಮೂಡಿಸಿದೆ.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೋಳ್ಳಿ ಸೇರಿದಂತೆ ಸಂಘವೂ ಕಸ್ತೂರೆಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಅರುಣ ಅವರ ಕುಟುಂಬಕ್ಕೆ ಈ ನೋವನ್ನ ಮರೆಯುವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.