Posts Slider

Karnataka Voice

Latest Kannada News

ತವರಲ್ಲೇ ಎರಡನೇ ಹಂತದ ಲಸಿಕೆ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ…!

1 min read
Spread the love

ಹುಬ್ಬಳ್ಳಿ: ಕಿಮ್ಸ್ ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಪತ್ನಿ ಜ್ಯೋತಿ ಪ್ರಲ್ಹಾದ್ ಜೋಶಿ ಅವರೊಂದಿಗೆ ಎರಡನೇ ಹಂತದ ಕೋವಿಶಿಲ್ಡ್ ಲಸಿಕೆಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ ಅವರು, ಜನರು ಉಹಾಪೋಹದ ಮಾತುಗಳಿಗೆ ಕಿವಿ ಕೊಡದೆ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಕೋವಿಡ್‌ ಗೆ ತುತ್ತಾದ ಸಂದರ್ಭದಲ್ಲಿ ಲಸಿಕೆಯಿಂದ ಉತ್ತಮ ರಕ್ಷಣೆ ದೊರೆಯಲಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ 802 ಟನ್ ಮೆಡಿಕಲ್ ಆಕ್ಸಿಜನ್ ನಿಗದಿಪಡಿಸಿ ಪೂರೈಸಲು ಕ್ರಮಕೈಗೊಳ್ಳಲಾಗುತ್ತಿದೆ. ಇದರಲ್ಲಿ ಶೇ.90 ರಷ್ಟು ಆಕ್ಸಿಜನ್ ರಾಜ್ಯದಲ್ಲಿ ತಯಾರಾಗಿ ಇಲ್ಲಿಗೆ ಪೂರೈಕೆ ಆಗುತ್ತಿದೆ. ಉಳಿದ ಶೇ.10 ರಷ್ಟು ಆಕ್ಸಿಜನ್ ಸಹ ರಾಜ್ಯದಿಂದಲೇ ಪೂರೈಸಲು ರಾಜ್ಯ ಸರ್ಕಾರ ಕೋರಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. 1.22 ಲಕ್ಷ ರೆಮಿಡಿಸಿವರ್ ವೈಲ್ ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.


Spread the love

Leave a Reply

Your email address will not be published. Required fields are marked *

You may have missed