ವಿನಯ ಕುಲಕರ್ಣಿ ಜಾಮೀನು ತೀರ್ಪು ಕಾಯ್ದಿರಿಸಿದ ಹೈಕೋರ್ಟ್…!

ಬೆಂಗಳೂರು: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು ತೀರ್ಪನ್ನ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ಹತ್ತು ದಿನದಲ್ಲಿ ನಾಲ್ಕನೇಯ ಬಾರಿಗೆ ನಡೆದ ವಿಚಾರಣೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪರವಾದ ವಕೀಲ ಶಶಿಕಿರಣ ಶೆಟ್ಟಿ ಅವರು, ಜಾಮೀನು ನೀಡುವಂತೆ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿವಾದವನ್ನು ಸಿಬಿಐ ಮಂಡನೆ ಮಾಡಿತು.
ಎರಡು ಕಡೆಯ ವಾದ-ಪ್ರತಿವಾದವನ್ನ ಆಲಿಸಿದ ನ್ಯಾಯಾಧೀಶರಾದ ಕೆ.ನಟರಾಜ್ ಅವರು ತೀರ್ಪನ್ನ ಕಾಯ್ದಿರಿಸಿ ಆದೇಶ ಮಾಡಿದ್ದಾರೆ.
ವಿನಯ ಕುಲಕರ್ಣಿ ಅವರ ಬಂಧನವಾಗಿ ಇಂದಿಗೆ ಬರೋಬ್ಬರಿ 5 ತಿಂಗಳು ಹದಿನೇಳು ದಿನಗಳಾಗಿದ್ದು, ಸಧ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ದಿನಗಳನ್ನ ಕಳೆಯುತ್ತಿದ್ದಾರೆ. ಕಳೆದ ಹತ್ತು ದಿನದಲ್ಲಿ ನಾಲ್ಕು ಬಾರಿ ವಿಚಾರಣೆಯನ್ನ ಮುಂದೂಡಲಾಗಿತ್ತು.
ನ್ಯಾಯಾಧೀಶರು ತೀರ್ಪನ್ನ ಕಾಯ್ದಿರಿಸಿದ್ದರಿಂದ, ಯಾವಾಗಲಾದರೂ ಆದೇಶ ಹೊರ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.