ವಿಧಾನಪರಿಷತ್ ಚುನಾವಣೆ- ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್…!

ಬೆಂಗಳೂರು: ಕರ್ನಾಟಕ ವಿಧಾನಪರಿಷತ್ತಿಗೆ 2022ರ ಜೂನ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳಾಗ ಬಯಸುವವರಿಂದ ಅರ್ಜಿಗಳನ್ನ ಪಡೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.

ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿನ ಜಿಲ್ಲಾಧ್ಯಕ್ಷರು ಆಕಾಂಕ್ಷಿಗಳಿಂದ ಅರ್ಜಿಗಳನ್ನ ಪಡೆದು, ಮೇ 15ರ ಒಳಗಾಗಿ ಪಟ್ಟಿಯನ್ನ ಕೆಪಿಸಿಸಿಗೆ ತಲುಪಿಸುವಂತೆ ಆದೇಶ ಮಾಡಿದ್ದಾರೆ.
ಸುಮಾರು ಒಂದು ವರ್ಷದ ಪೂರ್ವದಲ್ಲೇ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಮುಂದಾಗಿರುವುದು, ಪಕ್ಷದಲ್ಲಿ ಹೊಸತನವನ್ನ ಮೂಡಿಸಿದೆ. ಇದೀಗ ಕೆಪಿಸಿಸಿ ಅಧ್ಯಕ್ಷ ಶಿವುಕುಮಾರ, ಮೊದಲೇ ಇಂತಹದ ತೀರ್ಮಾನಕ್ಕೆ ಬಂದಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಈ ಪತ್ರವೂ ಜಿಲ್ಲೆಯ ಅಧ್ಯಕ್ಷರುಗಳಿಗೆ ತಲುಪಿದ್ದು, ಕೆಲವೇ ದಿನಗಳಲ್ಲಿ ಆಕಾಂಕ್ಷಿಗಳ ಪಟ್ಟಿಯನ್ನ ಸಿದ್ಧಪಡಿಸಬೇಕಿದೆ.