Posts Slider

Karnataka Voice

Latest Kannada News

ಶಿಕ್ಷಕರ ಸಂಘಟಕ ‘ಪ್ರಧಾನ ಗುರುಗಳು’ ಕೋವಿಡ್ ನಿಂದ ಸಾವು…!

1 min read
Spread the love

ಬೈಲಹೊಂಗಲ: ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದು ಮನೆಗೆ ಮರಳಿದ ಕೆಲವೇ ಸಮಯದಲ್ಲಿ ಅನಾರೋಗ್ಯಗೊಂಡು ಆಸ್ಪತ್ರೆಗೆ ಸಾಗಿಸಿದ ಕೆಲವೊತ್ತಿನಲ್ಲಿ ಕುವೆಂಪು ಮಾದರಿ ಶಾಲೆಯ ಪ್ರಧಾನ ಗುರುಗಳು ಸಾವಿಗೀಡಾದ ಘಟನೆ ನಡೆದಿದೆ.

ನೇಸರಗಿಯ ಕುವೆಂಪು ಮಾದರಿ ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಬಾಗಲೆ ಎಂಬುವವರೇ ಮೃತರಾಗಿದ್ದು, ನಂತರ ಟೆಸ್ಟ್ ಮಾಡಿದಾಗ ಕೋವಿಡ್-19 ಪಾಸಿಟಿವ್ ಎಂಬುದು ಗೊತ್ತಾಗಿದೆ.

ಮೂರು ಮಕ್ಕಳು ಹೊಂದಿದ್ದ ಬಸವರಾಜ ಬಾಗಲೆ ಅವರು, ಬೈಲಹೊಂಗಲ ತಾಲ್ಲೂಕಿನಲ್ಲಿ ಶಿಕ್ಷಕರ ಮತ್ತು ಸರ್ಕಾರಿ ನೌಕರರ ಸಂಘಟನೆಯನ್ನು ಬೇರುಮಟ್ಟದಿಂದ ಕಟ್ಟಿ ಬೆಳಿಸಿದ್ದರು. ಸರ್ಕಾರಿ ನೌಕರರ ಸಂಘ ಬೈಲಹೊಂಗಲ ತಾಲ್ಲೂಕಾ ಘಟಕದ ನಾಲ್ಕು ಅವಧಿ ಹಿರಿಯ ಉಪಾಧ್ಯಕ್ಷ ರಾಗಿ ಕಳೆದ ಅವಧಿಯ ಅಧ್ಯಕ್ಷರಾಗಿ, ಕರಾಪ್ರಾಶಾಶಿ ಸಂಘದ ರಾಜ್ಯ ಘಟಕದ ನಾಮನಿರ್ದೆಶನ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.

ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಹೋರಾತ್ರಿ ಹೊರಾಟ ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳ ಜೊತೆಗೆ ಗಟ್ಟಿತನ ದಿಂದ ಮಾತನಾಡಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಚಾಣಾಕ್ಷತೆಯನ್ನು ಹೊಂದಿದ್ದರು. ಶಿಕ್ಷಕರ ಸಂಘಟನೆಗೆ ಆನೆ ಬಲ ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. “ಪರೋಪಕಾರಂ ಇದಂ ಶರೀರಂ” “ಸರ್ವೆ ಜನ ಸುಖನೋ ಭವಂತು” ವೆಂಬ ಉಕ್ತಿಯಂತೆ ಕೇವಲ ಶಿಕ್ಷಕರಿಗಾಗಿಯೇ ತನ್ನ ಜೀವನದುದ್ದಕ್ಕೂ ಬದುಕಿದರು. ತನಗಾಗಿ ತನ್ನ ಹೆಂಡತಿ ಮಕ್ಕಳಿಗಾಗಿ ಒಂದು ದಿನವೂ ಚಿಂತಿಸಲ್ಲಿಲ್ಲ. ಸಂಘಟನೆಗಾಗಿ ಹಗಲಿರುಳು ಧಣಿವರಿಯದೇ ದುಡಿದು ಶಿಕ್ಷಕರ ಮತ್ತು ಸರ್ಕಾರಿ ನೌಕರರ ಹೃದಯದಲ್ಲಿ ಹಚ್ಚು ಹಸಿರಾಗಿ ಉಳಿದರು. ಅವರ ಅಗಲಿಕೆಯಿಂದ ಇಡೀ ತಾಲೂಕಿನ ಸಮಸ್ತ ಶಿಕ್ಷಕರು ಮತ್ತು ನೌಕರರಿಗೆ ತುಂಬಲಾರದ ನಷ್ಟ ವಾಗಿದೆ. ದೇವರು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಶಿಕ್ಷಕರು ಮತ್ತು ನೌಕರರು ಪ್ರಾರ್ಥಿಸಿದ್ದಾರೆ.


Spread the love

Leave a Reply

Your email address will not be published. Required fields are marked *