Posts Slider

Karnataka Voice

Latest Kannada News

Spread the love

ಧಾರವಾಡ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲಘಟಗಿಯ ಕಾಂಗ್ರೆಸ್ ಮುಖಂಡ ಬಾಬುಸಾಹೇಬ ಕಾಶೀಮನವರ ಇಂದು ನಿಧನರಾಗಿದ್ದು, ನಾಳೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ದಾಸ್ತಿಕೊಪ್ಪದ ಬಾಬುಸಾಹೇಬ ಕಾಶೀಮನವರ, ಮದುವೆಯ ನಂತರ ಕಲಘಟಗಿಯಲ್ಲಿ ಬಂದು ವಾಸಿಸುತ್ತಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, ಕಲಘಟಗಿ ಶಾಸಕನಾಗುವ ಕನಸು ಕಂಡಿದ್ದರು.

ಪಕ್ಷೇತರ ಅಭ್ಯರ್ಥಿಯಾಗಿ ತೀವ್ರ ಪೈಪೋಟಿ ನೀಡಿದ್ದ ಬಾಬು ಕಾಶೀಮನವರ, ನಂತರದ ದಿನಗಳಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಹಲವು ದಿನಗಳಿಂದ ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆಯನ್ನ ಪಡೆಯುತ್ತಿದ್ದರು.

ಧಾರವಾಡ ಜಿಲ್ಲೆಯೂ ಸೇರಿದಂತೆ ಹಲವೆಡೆ ಇವರನ್ನ ಪಿಸ್ತೂಲ್ ಬಾಬು ಎಂದೇ ಕರೆಯುತ್ತಿದ್ದರು. ಬಡವರ ಪರವಾಗಿ, ದೀನದಲಿತರ ಪರವಾಗಿ ಬಾಬು ಕಾಶೀಮನವರ ಸಾಕಷ್ಟು ಕೆಲಸ ಮಾಡಿದ್ದರು.

ಮೃತರ ನಿಧನದಿಂದ ಕ್ಷೇತ್ರ ಹಿರಿಯರೊಬ್ಬರನ್ನ ಕಳೆದುಕೊಂಡಂತಾಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಧೈರ್ಯವನ್ನ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed