ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ…!
1 min readಬೆಂಗಳೂರು: ಕಳೆದ ವರ್ಷ ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿ ವಿಚಾರಣೆಯನ್ನ ಏಪ್ರಿಲ್ 19ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕೈವಾಡದ ಮೇಲೆ ಸಿಬಿಐ ಬಂಧನ ಮಾಡಿತ್ತು. ಅಂದಿನಿಂದ ವಿನಯ ಕುಲಕರ್ಣಿಯವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ.
ಧಾರವಾಡ ನ್ಯಾಯಾಲಯದಲ್ಲಿ ಈ ಮೊದಲು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು, ಅಲ್ಲಿಯೂ ಕೂಡಾ ತಿರಸ್ಕೃತಗೊಂಡಿತ್ತು. ಇದಾದ ನಂತರ ಧಾರವಾಡ ಹೈಕೋರ್ಟ್, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಬೇಲ್ ವಜಾಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ವಿನಯ ಕುಲಕರ್ಣಿಯವರ ಪರ ವಕೀಲರಾದ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನವಾಗಿ ಬರೋಬ್ಬರಿ 132 ದಿನಗಳು ಕಳೆದಿದ್ದು, ಕ್ಷೇತ್ರದ ಕಾರ್ಯಕರ್ತರಲ್ಲಿ ಅಭಿಮಾನಿಗಳಲ್ಲಿ ಇಂದು ಬೇಲ್ ಸಿಕ್ಕೆ ಸಿಗುತ್ತದೆ ಎಂಬ ಭರವಸೆ ಹೊಂದಿದ್ದರು.