ಕೊರೋನಾ ರೋಗಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು…!

ಕಲಬುರಗಿ: ಕೊರೋನಾ ಸೋಂಕಿತನ ನರಳಾಟ ಕಣ್ಣಾರೆ ಕಂಡು ಪೊಲೀಸ್ ಪೇದೆಯೋರ್ವ ಹೃದಯಘಾತದಿಂದ ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ನಿಮೋನಿಯಾದಿಂದ ಬಳಲುತ್ತಿದ್ದ ಪೇದೆ ಆನಂದನನ್ನ ಕಳೆದ ಐದು ದಿನಗಳ ಹಿಂದೆ ಕೋವಿಡ್ ಸಸ್ಪೆಕ್ಟ್ ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳ ಹಿಂದೆ ಪಕ್ಕದ ಬೆಡ್ ಮೇಲೆ ಮಲಗಿದ್ದ ವ್ಯಕ್ತಿಯೋರ್ವ ಕೊರೋನಾದಿಂದ ನರಳುತ್ತಿದ್ದನ್ನ ಕಂಡು ಆನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದಕ್ಕೂ ಮುನ್ನ ಪೇದೆ ಆನಂದ್, ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿ ಕೊರೋನಾ ಆತಂಕದ ಬಗ್ಗೆ ತಿಳಿಸಿ ನನಗೂ ಇಂತಹ ಸಾವು ಬರಬಹುದು ಅಂತಾ ತಿಳಿಸಿದ್ದ ಎನ್ನಲಾಗಿದೆ. ಘಟನೆಯ ನಂತರ ಇಲಾಖೆಯಲ್ಲಿ ಈ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ.
ಕೊರೋನಾ ಬಂದರೂ ಧೃತಿಗಡೆದೇ ಚಿಕಿತ್ಸೆಯನ್ನ ಪಡೆಯಬೇಕಾಗಿದೆ. ಭಯದಿಂದ ನೋಡಿದ್ರೇ ತೊಂದರೆ ತಪ್ಪಿದ್ದಲ್ಲ ಎಂಬುದು ಈ ಮೂಲಕ ಗೊತ್ತಾಗುತ್ತದೆ.