ಮಕ್ಕಳ ಭವಿಷ್ಯ ಯುಗಾದಿ ನಂತರ ನಿರ್ಧಾರ: ಸಚಿವ ಸುರೇಶಕುಮಾರ…!
1 min readಚಿತ್ರದುರ್ಗ: ಒಂದನೇ ತರಗತಿಯಿಂದ ಒಂಬತ್ತನೇಯ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಬೇಕಾ ಅಥವಾ ಹಾಗೇ ಪಾಸ್ ಮಾಡಬೇಕಾ ಎಂಬುದರ ಬಗ್ಗೆ ಯುಗಾದಿಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ.
1ರಿಂದ 5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ನಡೆದಿಲ್ಲ. 6ರಿಂದ 9ರ ವರೆಗೆ ವಿದ್ಯಾಗಮ ನಡೆಸಲಾಗಿದೆ. ಪರೀಕ್ಷೆ ನಡೆಸಬೇಕೆಂದು ಉದ್ದೇಶಿಸಲಾಗಿತ್ತು. ಅನೇಕ ಸಭೆಗಳು ನಡೆದಿದ್ದು, ಪರ ವಿರೋಧ ಬಂದಿದೆ. ಕೆಲವರು, ಮಕ್ಕಳನ್ನ ಹಾಗೇಯೇ ಪಾಸ್ ಮಾಡಿದರೆ ಅದು ಕೋವಿಡ್ ಪಾಸ್ ಆಗುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪೋಷಕರ ಪ್ರತಿನಿಧಿ ಮತ್ತು ಶಿಕ್ಷಣ ತಜ್ಞರೊಂದಿಗೆ ಸಮಾಲೋಷನೆ ನಡೆಸಿದ್ದು, ಅಂತಿಮ ತೀರ್ಮಾನವನ್ನ ಯುಗಾದಿಯ ನಂತರವೇ ತೆಗೆದುಕೊಳ್ಳಲಾಗುವುದೆಂದು ಹೇಳಿದರು.
ಈಗ ರಾತ್ರಿ ಕರ್ಪ್ಯೂ ಇದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುವುದಿಲ್ಲ. ಮಕ್ಕಳಿಗೆ ತೊಂದರೆಯಾಗದಂತೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನ ನಡೆಸಲಾಗುವುದು ಎಂದು ಸಚಿವ ಸುರೇಶಕುಮಾರ ತಿಳಿಸಿದರು.